ರಾಬರ್ಟ್ ಚಿತ್ರಕ್ಕೆ ಐಶ್ವರ್ಯಾ ರೈ ಬರಲ್ಲ: ದರ್ಶನ್

ರಾಬರ್ಟ್ ಚಿತ್ರಕ್ಕೆ ಐಶ್ವರ್ಯಾ ರೈ ಬರಲ್ಲ: ದರ್ಶನ್

ಬೆಂಗಳೂರು, ಮೇ. 6, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರಕ್ಕೆಇಂದು ಬನಶಂಕರಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆಯಿತು.

ಈ ನಡುವೆ ರಾಬರ್ಟ್ ಚಿತ್ರದಲ್ಲಿ ಕನ್ನಡತಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತೊಂದು ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಚಿತ್ರದ ಸ್ಕ್ರಿಪ್ಟ್ ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ದರ್ಶನ್ ಇವತ್ತಿನಿಂದ ನನ್ನ ಕೆಲಸವನ್ನ ಶುರು ಮಾಡುತ್ತಿದ್ದೇನೆ. ಅನ್ನದಾತರು ಅನ್ನ ಕೊಡುತ್ತಿದ್ದಾರೆ. ಇವತ್ತಿನಿಂದಲೇ ಚಿತ್ರೀಕರಣ ಶುರು ಮಾಡುತ್ತಿದ್ದೇವೆ ಎಂದು ಹೇಳಿದರು. ಇನ್ನು ನೀವು ಏನೇನು ಅಂದುಕೊಂಡಿದ್ದೀರೋ ಅದಕ್ಕೆ ಬೇರೆಯಾಗಿರುತ್ತದೆ. ನಮ್ಮ ಚಿತ್ರಕ್ಕೆ ಐಶ್ವರ್ಯ ರೈ ಬರುತ್ತಿಲ್ಲ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos