ವಿಶೇಷ ದಾಖಲೆ ಬರೆದ ರಿಷಬ್ ಪಂತ್

ವಿಶೇಷ ದಾಖಲೆ ಬರೆದ ರಿಷಬ್ ಪಂತ್

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಎರಡು ತಂಡಗಳು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್​ಗಾಗಿ ಕಣಕ್ಕಿಳಿದ ಡೆಲ್ಲಿ ನಾಯಕ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಯಾರೂ ಮಾಡದ ದಾಖಲೆ ಮಾಡಿದ್ದಾರೆ.

2022ರ ವರ್ಷಾಂತ್ಯದಲ್ಲಿ ಅಪಘಾತಕ್ಕೀಡಾಗಿದ್ದ ರಿಷಭ್​ ಪಂತ್​ ಒಂದು ವರ್ಷದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿದಿದ್ದಾರೆ. ಇತ್ತ ರಿಷಬ್ ಪಂತ್​ಗೆ ಡೆಲ್ಲಿ ತಂಡದ ಪರ ಇದು ನೂರನೇ ಪಂದ್ಯ. ಈ ಮೂಲಕ ಪಂತ್, ಈ ಫ್ರಾಂಚೈಸಿಯ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

2016ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ರಿಷಭ್​ ಪಂತ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ನಿರಂತರವಾಗಿ ಪ್ರತಿನಿಧಿಸಿದ್ದಾರೆ. ರಾಜಸ್ಥಾನ ರಾಯಲ್ಸ್​ ವಿರುದ್ಧ ಕಣಕ್ಕಿಳಿದ ರಿಷಭ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಿಷಭ್​ ಪಂತ್ 34.33ರ ಸರಾಸರಿಯಲ್ಲಿ 15 ಅರ್ಧಶತಕ, 1 ಶತಕ ಒಳಗೊಂಡಂತೆ 99 ಇನ್ನಿಂಗ್ಸ್​ನಲ್ಲಿ 2884 ರನ್​ ಗಳಿಸಿದ್ದಾರೆ. ರಿಷಭ್​ ಪಂತ್​ ನಂತರದ ಸ್ಥಾನದಲ್ಲಿ ಅಮಿತ್​ ಮಿಶ್ರಾ (99), ಶ್ರೇಯಸ್​ ಅಯ್ಯರ್ (87)​ ಹಾಗೂ ಡೇವಿಡ್​ ವಾರ್ನರ್​ (82) ಇದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos