ಸಂಚಾರ ನಿಯಮ ಉಲ್ಲಂಘನೆಗೆ ಪರಿಷ್ಕೃತ

ಸಂಚಾರ ನಿಯಮ ಉಲ್ಲಂಘನೆಗೆ ಪರಿಷ್ಕೃತ

ಬೆಂಗಳೂರು, ಸೆ. 5: ದಂಡ ಶುಲ್ಕ ಅನ್ವಯ  ಚಾಲನೆ ಗೊಳಿಸಲಾಗಿದೆ. ಮೊದಲನೆ ದಿನವೆ ಮೊದಲ ದಂಡ ಶುಲ್ಕವಾಗಿ ದ್ವಿಚಕ್ರ ವಾಹನ ಸವಾರನೊಬ್ಬನಿಂದ ಬರೋಬ್ಬರಿ ಹದಿನೇಳು ಸಾವಿರ ರೂ. ದಂಡ ವಿಧಿಸಲಾಗಿದೆ.

ಕುಮಾರಸ್ವಾಮಿ ಲೇಔಟ್ ಸಂಚಾರಿ  ಪೋಲಿಸರಿಗೆ ಸಿಕ್ಕಿ ಬಿದ್ದ ಆಕಾಶ್, ನ್ಯಾಯಾಲಯಕ್ಕೆ ದಂಡ ಪಾವತಿ ಮಾಡಿದ್ದಾನೆ. ಕುಮಾರಸ್ವಾಮಿ ಸಂಚಾರ ಠಾಣೆ ಎಎಸ್ಐ ಕರ್ತವ್ಯ ನಿರ್ವಹಣೆಯ ವೇಳೆ ಆಕಾಶ್ ಸಿಕ್ಕಿ ಬಿದ್ದಿರುವ ಯುವಕ. ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸಿರಲಿಲ್ಲ, ಮದ್ಯಪಾನ ಮಾಡಿದ್ದ, ಡಿಎಲ್ ಇರಲಿಲ್ಲ, ಹಿಂಬದಿ ಸವಾರ ಕೂಡಾ ಹೆಲ್ಮೆಟ್ ಧರಿಸದೆ ಮದ್ಯಪಾನ ಮಾಡಿದ್ದ, ಈ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು ಎಎಸ್ಐ ಶಿವಣ್ಣ.

ಮದ್ಯಪಾನ ಮಾಡಿ ವಾಹನ ಚಾಲನೆಗೆ ಹತ್ತುಸಾವಿರ, ಚಾಲನಾ ಪರವಾನಗಿ ಇಲ್ಲದ ಚಾಲನೆಗೆ ಐದು ಸಾವಿರ, ಹೆಲ್ಮೆಟ್ ಧರಿಸದ ಚಾಲನೆಗೆ ಒಂದು ಸಾವಿರ‌‌ ಮತ್ತು ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಕಾರಣ ಓಂದು ಸಾವಿರ ದಂಡ ವಿಧಿಸಿದ ನ್ಯಾಯಾಲಯ, ಶುಲ್ಕ ಸಂಗ್ರಹಿಸಿ ರಶೀದಿ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಸಂಚಾರಿ ವಿಭಾಗದ ಜಂಟಿ ಪೋಲಿಸ್ ‌ಆಯುಕ್ತ ರವಿಕಾಂತೇಗೌಡ ಹೊಸ ಪರಿಷ್ಕೃತ ದಂಡ ಪಾವತಿ ‌ನಿಯಮವನ್ನು ನಗರದಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಜೈಲಿಗೆ ಕಳಿಸುವ ಅವಕಾಶವಿದೆ. ಹೊಸ ಪದ್ದತಿ ಜಾರಿಗೆ ಬಂದ ನಂತರ ಮೊದಲ ಕೇಸ್ ದಾಖಲಿಸಿ ನ್ಯಾಯಾಲಯದ ಮೂಲಕ ಪರಿಷ್ಕೃತ ದಂಡ ಸಂಗ್ರಹಣೆ ಮಾಡಲಾಗಿದೆ. ಎಲ್ಲರೂ ನಿಯಮ ಪಾಲನೆ ಮಾಡಲು ಎಚ್ಚರಿಕೆಯ ಸಂದೇಶ ರವಾನೆಯಾಗಿದೆ ಎಂದು ತಿಳಿಸಿದರು.

ಕಾಲಾವಕಾಶ ಬೇಕು

ಸಂಚಾರ ನಿಯಮ ಉಲ್ಲಂಘನೆ  ಪ್ರಕರಣಗಳ ಪರಿಷ್ಕೃತ ದಂಡ ಶುಲ್ಕ ವಿಧಿಸುವ ನಿಯಮ ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಜಾರಿಯಾಗಲು ಇನ್ನೂ ಕೆಲವು ದಿನಗಳು ಸಮಯಾವಕಾಶ ಬೇಕಾಗುತ್ತದೆ ಎಂದರು. ನಗರ ಸೇರಿದಂತೆ ರಾಜ್ಯದ ಸಂಚಾರ ಪೋಲಿಸರು ದಂಡ ಶುಲ್ಕ ಸಂಗ್ರಹಣೆ ಮಾಡಲು ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ (ಡಿಪಿಎ)ಬಳಕೆ ಮಾಡಲಾಗುತ್ತಿದೆ. ಕಾಗದದ ಚಲನ್ ನೀಡುವ ಪದ್ದತಿ 8 ವರ್ಷಗಳ ಹಿಂದೆಯೇ ಸ್ಥಗಿತ ಗೊಳಿಸಲಾಗಿದೆ. ಚಲನ್ ಕೊಡಲು ಪಿಡಿಎ ಬೇಕು. ಅದರಲ್ಲಿ ಪರಿಷ್ಕೃತ ಶುಲ್ಕ ‌ಆಪ್ ಅಪ್ಡೇಟ್‌ ಆಗಿಲ್ಲ ಹೀಗಾಗಿ ಪೋಲಿಸರು ವಿಧಿ ಇಲ್ಲದೆ ಹಳೆ ಶುಲ್ಕ ವಿಧಿಸುತ್ತಿದ್ದಾರೆ. ಪಿಡಿಎ ಸಾಧನದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಿದ ಪ್ರಕರಣ ಸಂಭಂದಿಸಿದ ಶುಲ್ಕ ದಾಖಲಿಸಿದಾಗ ಅದಾಗಿ ಕಾಣಿಸುತ್ತದೆ. ನಮ್ಮ ಕೈಯಲ್ಲಿ ಏನೂ ಇಲ್ಲ. ಅದರ ಪ್ರಕಾರವೇ ಶುಲ್ಕ ವಿಧಿಸಲಾಗುತ್ತಿದೆ. ಪಿಡಿಎ ಅಪ್ಡೆಟ್ ಆಗುತ್ತಿದ್ದಂತೆ ಹೊಸ ಶುಲ್ಕ ತಾನಾಗಿಯೇ ಬರಲಿದೆ. ಎಂದು ಜಾಲಹಳ್ಳಿ ಕ್ರಾಸ್ ಸಿಗ್ನಲ್ ಬಳಿ ನಿಯಮ ಉಲ್ಲಂಘನೆ ಮಾಡುತ್ತಿದ್ದ, ಸವಾರರಿಗೆ ಕೇಸು ದಾಖಲಿಸುತ್ತಿದ್ದ ಹೆಸರೇಳಲಿಚ್ಚಿಸದ ಸಂಚಾರಿ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದರು.

ಸಾರಿಗೆ ಇಲಾಖೆ ಜಾಗೃತಿ : ಕೇವಲ ಪೋಲಿಸ್ ಇಲಾಖೆಯ ಮೇಲೆ ಹೊಣೆ ಹೊರಿಸದೆ ಚಾಲನಾ ಪರವಾಗಿ ನೀಡುವ ಸಾರಿಗೆ ಇಲಾಖೆಯ ವತಿಯಿಂದ ನೂತನ ದಂಡ ವಿಧಿಸುವ ಕುರಿತು ವಾಹನ ಸವಾರರಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸ ಬೇಕೆಂದು ಸಂಚಾರ ಮತ್ತು‌ ರಸ್ ಸುರಕ್ಷತೆ ವಿಭಾಗದ ಆಯುಕ್ತ ಪಿ.ಎಸ್. ಸಂಧು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos