ವಿಶ್ವದ ಬೆಸ್ಟ್ ಡೈರೆಕ್ಟರ್ಸ್ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದ ರಿಯಲ್ ಸ್ಟಾರ್

ವಿಶ್ವದ ಬೆಸ್ಟ್ ಡೈರೆಕ್ಟರ್ಸ್ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದ ರಿಯಲ್ ಸ್ಟಾರ್

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಎಂದರೆ ಎಲ್ಲರಿಗೂ ನೆನಪಾಗುವುದು ಅವರ ವಿಚಿತ್ರ ಡೈರೆಕ್ಷನ್ ಹಾಗೂ ವಿಚಿತ್ರ ಆಕ್ಟಿಂಗ್ ಇವರ ಈ ವಿಚಿತ್ರ ಶೈಲಿಯ ಆಕ್ಟಿಂಗ್ ಹಾಗೂ ನಿರ್ದೇಶನದಿಂದ ಹಲವಾರು ಜನರ ನಿದ್ದೆ ಕೆಡಿಸಿ ತಲೆಗೆ ಹುಳ ಬಿಟ್ಟಿದ್ದಾರೆ ಇವರ ಈ ವಿಚಿತ್ರ ಡೈರೆಕ್ಷನ್ ಹಾಗೂ ಆಕ್ಟಿಂಗ್ ಗೆ ಮನಸೋಲದವರೇ ಇಲ್ಲ…

ವಿಶ್ವದ ಅತ್ಯುತ್ತಮ ನಿರ್ದೇಶಕರ ಬಗ್ಗೆ ವಿವರಗಳನ್ನು ಸಂಗ್ರಹಿಸಿರುವ IMDb, ವಿಶ್ವದ ಟಾಪ್ 50 ನಿರ್ದೇಶಕರ ಹೆಸರನ್ನು ಬಿಡುಗಡೆ ಮಾಡಿದೆ. IMDb ವಿಶ್ವದ 50 ಅತ್ಯುತ್ತಮ ಚಲನಚಿತ್ರ ನಿರ್ದೇಶಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಿರ್ದೇಶಕರ ಪಟ್ಟಿಯಲ್ಲಿ ಸೆನ್ಸೇಷನಲ್ ಡೈರೆಕ್ಟರ್ ಹಾಗೂ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಸ್ಥಾನ ಪಡೆದಿದ್ದಾರೆ.

ವಿಶ್ವದ 50 ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಹಾಲಿವುಡ್ ಮತ್ತು ಬಾಲಿವುಡ್‌ನ ದೊಡ್ಡ ನಿರ್ದೇಶಕರು ಸೇರಿದ್ದಾರೆ. ಅದರಲ್ಲಿ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಹೆಸರೂ ಇದೆ. ಇದರಲ್ಲಿ ಉಪೇಂದ್ರ 8ನೇ ಸ್ಥಾನ ಪಡೆದಿದ್ದರಿಂದ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರು ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು. ಉಪೇಂದ್ರ ಇದುವರೆಗೆ 10 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಉಪೇಂದ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲೂ ನಾಯಕ ಉಪೇಂದ್ರ ಅವರಿಗೆ ಒಳ್ಳೆಯ ಮನ್ನಣೆ ಸಿಕ್ಕಿತ್ತು. ಸಿನಿಮಾಗಳ ನಟನೆ ಜತೆಗೆ ನಿರ್ದೇಶನದಲ್ಲೂ ವಿಶೇಷ ಛಾಪು ಮೂಡಿಸಿದವರು ಉಪೇಂದ್ರ.

ಓಂ, ಶ್, ಎ, ಮುಂತಾದ ಚಿತ್ರಗಳನ್ನು ತುಂಬಾ ವಿಭಿನ್ನವಾಗಿ ನಿರ್ದೇಶಿಸಿದ ಉಪೇಂದ್ರ ಅವರ ಎಲ್ಲ ಚಿತ್ರಗಳು ಇಡೀ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos