ಕಾಮುರಿಗೆ ಹೆಡೆಮುರಿ ಕಟ್ಟಲು ರೆಡಿ

ಕಾಮುರಿಗೆ ಹೆಡೆಮುರಿ ಕಟ್ಟಲು ರೆಡಿ

ಭೋಪಾಲ್, ಡಿ. 08 : ಲೈಂಗಿಕ ದೌರ್ಜನೆ ವಿರುದ್ಧ ದೇಶಾದ್ಯಂತ ಸಿಡಿದೆದ್ದಿರುವ ಮಹಿಳೆಯರು ಕಾಮುಕರಿಗೆ ಹೆಡೆಮುರಿ ಕಟ್ಟಲು ರೆಡಿಯಾಗಿದ್ದಾರೆ. ಹೆಣ್ಣು ಒಲಿದರೆ ನಾರಿ,ಮುನಿದರೆ ಮಾರಿ ಎನ್ನು ತ್ತಾರೆ. ಈ ಮಾತು ಅಕ್ಷರಸಹ ನಿಜ. ಈಗ ಕಾಮುರ ವಿರುದ್ಧ ಸಿಡಿದೆದ್ದಿದ್ದಾರೆ.
ಹೈದರಾಬಾದ್ ಪಶುವೈದ್ಯೆ ಹಾಗೂ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬಗ್ಗೆ ಇಡೀ ದೇಶವೇ ಮಮ್ಮಲ ಮರುಗಿ, ಕಾಮುಕರ ವಿರುದ್ಧ ಸಿಡಿದೆದ್ದಿದೆ. ಕಿಚ್ಚಿನ ಬಿಸಿ ಆರುವ ಮುನ್ನವೇ ಮಧ್ಯಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇತ್ತ ಧಾಮೋಹ್ ಜಿಲ್ಲೆಯಲ್ಲಿ ಯುವತಿಯೊಬ್ಬಳು ಕಾಮಪಿಶಾಚಿಗಳ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. 4 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ವಿಕೃತಿ ಮೆರೆದಿದ್ದ ಕಾಮುಕರಿಗೆ ಪೊಲೀಸ್ ರ ಎದುರೇ ವಕೀಲರ ತಂಡ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಂದೋರ್ ನ ಮ್ಹಾವ್ ಗ್ರಾಮದಲ್ಲಿ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos