RCBಯ ಹೊಸ ಲೋಗೋ ಹಾಗೂ ಜೆರ್ಸಿ ಅನಾವರಣ

RCBಯ ಹೊಸ ಲೋಗೋ ಹಾಗೂ ಜೆರ್ಸಿ ಅನಾವರಣ

ಬೆಂಗಳೂರು: ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಈ ನಡುವೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ಹೆಸರಿನಲ್ಲಿ ಬದಲಾವಣೆ ಮಾಡಿದೆ. Royal Challengers Bangalore ಎಂಬ ಹೆಸರಿನಲ್ಲಿ Royal Challengers Bengaluru ಎಂದು ಬದಲಾವಣೆ ಮಾಡಿದೆ.

IPL 2024 ರಲ್ಲಿ ಆರ್​ಸಿಬಿ ಹೊಸ ವಿನ್ಯಾಸದ ಲೋಗೋದೊಂದಿಗೆ ಕಣಕ್ಕಿಳಿಯಲಿದ್ದು, ಇದಕ್ಕೂ ಮುನ್ನ ಆರ್​ಸಿಬಿ ಐಪಿಎಲ್​ನಲ್ಲಿ 4 ಬಾರಿ ಲೋಗೋವನ್ನು ಬದಲಿಸಿಕೊಂಡಿದೆ.

ಐಪಿಎಲ್ 2024 ಸೀಸನ್​ ಆಡಲು ಆರ್​ಸಿಬಿ ತಂಡ ಸಜ್ಜಾಗಿದ್ದು, ಈ ಬಾರಿಯಾದರೂ ಕಪ್ ಗೆಲ್ಲಬೇಕೆನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಅಷ್ಟೇ ಅಲ್ಲದೆ, ಆರ್​ಸಿಬಿ ಆಟಗಾರರ ಜೆರ್ಸಿ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಆರ್​ಸಿಬಿ, “RCB ಕೆಂಪಾಗಿದೆ, ಈಗ ನೀಲಿ ಬಣ್ಣದಿಂದ ಮುತ್ತಿಕ್ಕಿದೆ. ನಮ್ಮ ಹೊಸ ರಕ್ಷಾಕವಚದೊಂದಿಗೆ ನಾವು ಸಿದ್ಧರಿದ್ದೇವೆ. ನಿಮಗಾಗಿ ಬೋಲ್ಡ್ ಆಗಿ ಆಡಲು! ರಾಯಲ್ ಚಾಲೆಂಜರ್ಸ್ ಬೆಂಗಳೂರು 2024 ರ ಪಂದ್ಯಾವಳಿಯನ್ನು ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ!” ಎಂದು ಬರೆದುಕೊಂಡಿದೆ.

ಎಕ್ಸ್ ಖಾತೆ ಮೂಲಕ ಆರ್​ಸಿಬಿ ತಂಡದ ಆಡಗಾರರು ಹೊಸ ಜೆರ್ಸಿಯೊಂದಿಗೆ ತೆಗೆದ ಫೋಟೋವನ್ನು ಹಂಚಿಕೊಳ್ಳಲಾಗಿದೆ. “ಇದು ದಪ್ಪವಾಗಿದೆ, ಇದು ಹೊಸದು, ಇದು ಕೆಂಪು ಮತ್ತು ನೀಲಿ ಮತ್ತು ಗೋಲ್ಡನ್ ಸಿಂಹ ಹೊಳೆಯುತ್ತಿದೆ” ಎಂದು ಬರೆದುಕೊಳ್ಳಲಾಗಿದೆ.

ವಿಶೇಷ ಎಂದರೆ ಆರ್​ಸಿಬಿ ಫ್ರಾಂಚೈಸಿಯು ತನ್ನ ಲೋಗೋವನ್ನು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ನಾಲ್ಕು ಬಾರಿ ಹೊಸ ಲೋಗೋದೊಂದಿಗೆ ಕಣಕ್ಕಿಳಿದಿದೆ. ಇದೀಗ ಐದನೇ ಬಾರಿಗೆ ಲೋಗೋ ಬದಲಿಸಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ.

ಫ್ರೆಶ್ ನ್ಯೂಸ್

Latest Posts

Featured Videos