ಪವಿತ್ರ ರಂಜಾನ್ ಮಾಸದಲ್ಲಿ ಭಿಕ್ಷೆಗಾಗಿ ದುಬೈಗೆ ಹೋಗುತ್ತಿದ್ದಾರೆ ಜನ..!

ಪವಿತ್ರ ರಂಜಾನ್ ಮಾಸದಲ್ಲಿ ಭಿಕ್ಷೆಗಾಗಿ ದುಬೈಗೆ ಹೋಗುತ್ತಿದ್ದಾರೆ ಜನ..!

ದುಬೈ, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ರಂಜಾನ್ ತಿಂಗಳಿನಲ್ಲಿ ದುಬೈ ಮತ್ತು ಅಬುದಾಬಿಯಲ್ಲಿ ಭಿಕ್ಷೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದೇ ಕಾರಣಕ್ಕೆ ದುಬೈನಲ್ಲಿ ರಂಜಾನ್ ತಿಂಗಳಿನಲ್ಲಿ ಭಿಕ್ಷುಕರ ಸಂಖ್ಯೆ ಏಕಾಏಕಿ ಹೆಚ್ಚಾಗುತ್ತದೆ. ಈ ಬಾರಿ ಕೂಡ ಈ ಹಿಂದೆ ಕಾಣದ ಭಿಕ್ಷುಕರು ದುಬೈನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಪ್ರವಾಸಿ ವೀಸಾ ಮೇಲೆ ಬಂದವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ದುಬೈ ಪೊಲೀಸರು ಒಂದು ದಿನ ಮೊದಲು ಪ್ರವಾಸಿ ವೀಸಾ ಮೇಲೆ ಬಂದಿದ್ದ ಏಷ್ಯಾದ ಅನೇಕ ದೇಶಗಳ ಜನರನ್ನು ವಾಪಸ್ ಕಳುಹಿಸಿದ್ದಾರೆ. ಒಂದು ತಿಂಗಳ ಪ್ರವಾಸಿ ವೀಸಾ ಪಡೆದು ಭಾರತ, ಬಾಂಗ್ಲಾ, ಪಾಕಿಸ್ತಾನ ದೇಶದ ಅನೇಕರು ದುಬೈಗೆ ತೆರಳಿದ್ದರು ಎನ್ನಲಾಗಿದೆ. ದುಬೈ ಪೊಲೀಸರು ವಶಕ್ಕೆ ಪಡೆದ ಭಿಕ್ಷುಕನೊಬ್ಬನ ಬಳಿ 18 ಲಕ್ಷ ರೂಪಾಯಿ ಸಿಕ್ಕಿದೆ. ಈತ ಭಿಕ್ಷೆ ಬೇಡಿ ಇಷ್ಟು ಹಣ ಸಂಪಾದಿಸಿದ್ದ ಎನ್ನಲಾಗಿದೆ. ರಂಜಾನ್ ವೇಳೆ ನಿರಾಶ್ರಿತರಿಗೆ ದಾನ ಮಾಡುವುದು ಶುಭಕರವೆಂದು ನಂಬಲಾಗಿದೆ. ದಾನಿಗಳ ಸಂಖ್ಯೆ ಹೆಚ್ಚಾಗುವ ಕಾರಣ ಭಿಕ್ಷುಕರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಈ ತಿಂಗಳು 250 ಭಿಕ್ಷುಕರನ್ನು ಬಂಧಿಸಲಾಗಿದೆಯಂತೆ. ಟ್ರಾವೆಲ್ ಕಂಪನಿಗಳು ದುಬೈಗೆ ಬರುವ ಭಿಕ್ಷುಕರಿಗೆ ಸಹಾಯ ಮಾಡಲಿವೆಯಂತೆ. ಗುಂಪೊಂದು ಭಿಕ್ಷುಕರನ್ನು ಬೇರೆ ದೇಶಕ್ಕೆ ಕಳುಹಿಸುವ ಕೆಲಸ ಮಾಡುತ್ತದೆ. ಅವ್ರಿಗೆ ವೀಸಾ ಕೊಡಿಸುತ್ತದೆ. ಪ್ರತಿ ವರ್ಷ ಈ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಲಿದೆ. ಕೆಲವರು ಪೊಲೀಸ್ ಕೈಗೆ ಸಿಕ್ಕಿಬಿದ್ರೆ ಮತ್ತೆ ಕೆಲವರು ತಪ್ಪಿಸಿಕೊಳ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos