ಒಂದಾಗಿ ತಪ್ಪದೆ ಮತ ಚಲಾಯಿಸೋಣ: ರಮೇಶ್ ಅರವಿಂದ್

ಒಂದಾಗಿ ತಪ್ಪದೆ ಮತ ಚಲಾಯಿಸೋಣ: ರಮೇಶ್ ಅರವಿಂದ್

ಬೆಂಗಳೂರು: ನಮ್ಮ ರಾಷ್ಟ್ರವನ್ನು ಮುನ್ನೆಡಸಲು ಎಲ್ಲರೂ ಒಂದಾಗಿ ತಪ್ಪದೆ ಮತ ಚಲಾಯಿಸೋಣವೆಂದು ಚುನಾವಣಾ ರಾಯಭಾರಿ, ಚಿತ್ರನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ್ ರವರು ವಿಧ್ಯಾರ್ಥಿಗಳನ್ನು‌ ಪ್ರೇರೇಪಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವಕ್ಕೆ ಹಲೋ ಎಂದಾಗ ಮಾತ್ರ ನಾವು ಪ್ರಜಾಪ್ರಭುತ್ವಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.

ಶೇ. 20 ರಷ್ಟು ಮಂದಿ ಒಂದಾಗಿ ಕೂಗಿದಾಗ ಹೆಚ್ಚು ಶಬ್ದ ಬರಲು ಸಾಧ್ಯವಿಲ್ಲ. ಅದೇ ಶೇ. 100 ರಷ್ಟು ಮಂದಿ ಒಟ್ಟಾಗಿ ಕೂಗಿದಾಗ ಶಬ್ದ ಜೊರಾಗಿ ಬರಲಿದೆ. ಅದೇ ರೀತಿ ಚುನಾವಣೆಯಲ್ಲಿಯೂ ಶೇ. 20 ರಷ್ಟು ಮತದಾನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ಒಟ್ಟಾಗಿ ಶೇ. 100 ರಷ್ಟು ಮತ ಚಲಾಯಿಸಿದಾಗ ಮಾತ್ರ ನಾವು ಉತ್ತಮ‌ ಪ್ರಜಾಪ್ರಭುತ್ವವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.

ಗೂಗಲ್ ನಲ್ಲಿ ನಿಮ್ಮ ಕ್ಷೇತ್ರದ ಆಭ್ಯರ್ಥಿ ಯಾರು, ಏನೇನು ಕೆಲಸ ಮಾಡಿದ್ದಾರೆ, ಅವರ ಹಿನ್ನೆಲೆ ಏನು, ಅವರ ನೀಡಿದ್ದ ಪ್ರನಾಳಿಕೆಯಲ್ಲಿ ಕಳೆದ 5 ವರ್ಷಗಳಲ್ಲಿ ಏನೆಲ್ಲಾ ಹೀಡೇರಿಸಿದ್ದಾರೆ ಎಂಬುದನ್ನು ಪರಿಶೀಲಿಸಿ. ಯಾವುದಾದರೂ ಅಭ್ಯರ್ಥಿಗೆ ಮತದಾನ ಮಾಡಿದರೆ ಅವರು ನಮಗೆ ಏನು ಮಾಡುತ್ತಾರೆ ಎಂಬುದನ್ನು ಕೂಲಂಕುಶವಾಗಿ ಆಲೋಚಿಸಿ ಮತದಾನ ಮಾಡಿ. ಯಾರೋ ಹೇಳಿದ ಮಾತು ಕೇಳಿ ಮತದಾನ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ನಮ್ಮ ರಾಷ್ಟ್ರವನ್ನು ಮುನ್ನೆಡಸಲು ಎಲ್ಲರೂ ಒಂದಾಗಿ ತಪ್ಪದೆ ಮತ ಚಲಾಯಿಸೋಣ. ನೀವೆಲ್ಲರೂ ಯುವ ಮತದಾರರಾಗಿದ್ದು, ತಮ್ಮ ಸ್ವಯಿಚ್ಛೆಯಿಂದ ಮತದಾನ ಮಾಡಲು ತಿಳಿಸಿದರು.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಯುವ ಮತದಾರರು ಏಪ್ರಿಲ್ 26ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮತದಾನ‌ ಮಾಡುವ ಅವಕಾಶವಿದ್ದು, ಎಲ್ಲರೂ ತಪ್ಪದೆ ಮತ ಚಲಾಯಿಸಲು ತಿಳಿಸಿದರು.

ಈ ವೇಳೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿಯಾದ ರಮಾಮಣಿ, ಬಿಎಂಎಸ್ ಕಾಲೇಜಿನ ಪ್ರಾಂಶುಪಾಲರಾದ ಫ್ರೊ. ವಸುಂದರಾ ಸೇರಿದಂತೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos