ಭರ್ಜರಿ ಶತಕ ಸಿಡಿಸಿದ ರಜತ್ ಪಾಟಿದಾರ್

ಭರ್ಜರಿ ಶತಕ ಸಿಡಿಸಿದ ರಜತ್ ಪಾಟಿದಾರ್

ಬೆಂಗಳೂರು: ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಬ್ಯಾಟರ್ ರಜತ್ ಪಾಟಿದಾರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಎರಡು ದಿನಗಳ ಈ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಲಯನ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಯನ್ಸ್ ಪರ ಡಾನ್ ಮೌಸ್ಲಿ (60) ಅರ್ಧಶತಕ ಬಾರಿಸಿದರು.

ಈ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಲಯನ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ 233 ರನ್​ಗಳಿಸಿ ಆಲೌಟ್ ಆಯಿತು. ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಅಭಿಮನ್ಯು ಈಶ್ವರನ್ ಹಾಗೂ ರಜತ್ ಪಾಟಿದಾರ್ ಉತ್ತಮ ಆರಂಭ ಒದಗಿಸಿದರು. ಅದ್ಭುತ ಇನಿಂಗ್ಸ್ ಆಡಿದ ರಜತ್ ಪಾಟಿದಾರ್ ಇಂಗ್ಲೆಂಡ್ ಲಯನ್ಸ್ ಬೌಲರ್​ಗಳ ಬೆಂಡೆತ್ತಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಮುಂದಾದ ರಜತ್ ಪಾಟಿದಾರ್ 141 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 111 ರನ್ ಬಾರಿಸಿ ಔಟಾದರು.

ಫ್ರೆಶ್ ನ್ಯೂಸ್

Latest Posts

Featured Videos