ಅವಧಿ ಪೂರ್ವ ಜನಿಸಿದ ಮಕ್ಕಳಿಗೆ ರೈನ್ ಬೋ ವೇದಿಕೆ

ಅವಧಿ ಪೂರ್ವ ಜನಿಸಿದ ಮಕ್ಕಳಿಗೆ ರೈನ್ ಬೋ ವೇದಿಕೆ

ಮಹದೇವಪುರ, ನ. 17:  ಒಂಬತ್ತು ತಿಂಗಳ ಒಳಗಾಗಿ ಜನಿಸುವ ಮಕ್ಕಳ ಆರೈಕೆ ದೊಡ್ಡ ಸವಾಲಾಗಿದ್ದು, 750 ಗ್ರಾಂನಿಂದ 1.5 ಕೆ.ಜಿವರೆಗೆ ಜನಿಸುವ ಮಕ್ಕಳಿಗೆ ವಿಶೇಷ ಆರೈಕೆ ಜೊತೆಗೆ ಆಧುನಿಕ ಚಿಕಿತ್ಸೆ ಕೂಡ ಅಗತ್ಯವಿರುತ್ತದೆ ಎಂದು ರೈನ್ ಬೋ ಮಕ್ಕಳ ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ಕ್ಲಸ್ಟರ್ ಹೆಡ್ ನೀರಜ್ ಲಾಲ್ ತಿಳಿಸಿದರು.

ಮಾರತ್‌ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಇಸಿಎಂಒ ಉಪಕರಣದ ಕುರಿತು ಮಾತನಾಡಿದ ಅವರು, ಸಾಕಷ್ಟು ಮಕ್ಕಳಿಗೆ ಪುನರ್ಜನ್ಮ ನೀಡಿರುವ ರೈನ್ಬೋ ಮಕ್ಕಳ ಆಸ್ಪತ್ರೆ ವಿಭಿನ್ನ ರೀತಿಯಲ್ಲಿ ವಿಶ್ವ ಅವಧಿಪೂರ್ವ ಜನನ ದಿನವನ್ನು ಆಚರಿಸಲಾಯಿತು ಎಂದರು.

ಎನ್ಐಸಿಯು ಪುನರ್ಭೇಟಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳೆಲ್ಲ ಜನಿಸಿದ ನಂತರದಲ್ಲಿ ಎದುರಾದ ಸಾಕಷ್ಟು ಸವಾಲು ಹಾಗೂ ಸಮಸ್ಯೆಗಳ ಜೊತೆಗೆ ಹೋರಾಡಿ ಇಂದು ಆರೋಗ್ಯಕರವಾಗಿ ಬೆಳೆದು ನಿಂತಿದ್ದಾರೆ. ಈ ಕಾರಣಕ್ಕೆ ರೈನ್ ಬೋ ಆಸ್ಪತ್ರೆ ಈ ಮಕ್ಕಳನ್ನೆಲ್ಲಾ ಒಟ್ಟುಗೂಡಿಸಿ ಅವರನ್ನ ಅವಧಿ ಪೂರ್ವ ಜನನ ದಿನದ ಅಂಗವಾಗಿ ಗೌರವಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿಯೋನಾಟಾಲಜಿಸ್ಟ್ ಮುಖ್ಯಸ್ಥ ಡಾ. ರಜತ್ ಆತ್ರೇಯ, ಕಳೆದ ನಾಲ್ಕು ವರ್ಷಗಳಲ್ಲಿ ಆಸ್ಪತ್ರೆಯಲ್ಲಿ 1500 ಮಕ್ಕಳ ಜನನವಾಗಿರಬಹುದು. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಅವಧಿಪೂರ್ವ ಜನಿಸಿವೆ. ಈ ಕಾರ್ಯಕ್ರಮದ ಮೂಲಕ ಅವರನ್ನೆಲ್ಲಾ ಇಲ್ಲಿ ಒಂದುಗೂಡಿಸಿ ಆ ಮಕ್ಕಳ ಇಲ್ಲಿಯವರೆಗಿನ ಪಯಣವನ್ನ ಅನಾವರಣಗೊಳಿಸಲಾಗುತ್ತಿದೆ.

ಪಾಲಕರಿಗೂ ಕೂಡಾ ತಮ್ಮ ಮಕ್ಕಳ ಕಷ್ಟಪಟ್ಟು ಅಪಾಯದಿಂದ ಪಾರಾಗಿ ಬಂದಿದ್ದು, ಮತ್ತು ಆಸ ಸಂದರ್ಭದಲ್ಲಿ ಕುಟುಂಬ ಅನುಭವಿಸಿದ ಸಂಕಷ್ಟಗಳನ್ನ ಹಂಚಿಕೊಳ್ಳಲು ಇದು ವೇದಿಕೆಯಾಗಿದೆ”, ಎಂದರು.

“ನನ್ನ ಮಗು ಹುಟ್ಟಿದಾಗ 1 ಕೆ.ಜಿ ಇತ್ತು. ಮಗುವಿಗೆ ಉಸಿರಾಟದ ತೊಂದರೆಯಿಂದ ಹಿಡಿದು ಸಾಕಷ್ಟು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆ ಇತ್ತು. ಬದುಕುಳಿಯುವ ಆಸೆಯನ್ನೇ ಬಿಟ್ಟಿದ್ದೆವು. ಆದರೆ ಮಗುವಿಗೆ ಈಗ 5 ವರ್ಷ. ಆರೋಗ್ಯವಾಗಿ ಈಗ ಆಟ ಆಡಿಕೊಂಡಿದ್ದಾನೆ. ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಸೌಲಭ್ಯ ಹಾಗೂ ವೈದ್ಯರ ಸಹಕಾರದಿಂದ ಮಗು ಈಗ ಲವಲವಿಕೆಯಿಂದಿದೆ,” ಎಂದು ಅವಧಿಪೂರ್ವ ಜನಿಸಿದ ಮಗುವಿನ ತಂದೆಯೊಬ್ಬರು ಹೇಳಿದರು.

ಜಾಗತಿಕವಾಗಿ ಪ್ರತಿವರ್ಷ 15 ಮಿಲಿಯನ್ ಅವಧಿಪೂರ್ವ ಮಕ್ಕಳ ಜನನವಾಗುತ್ತದೆ. ಈ ರೀತಿಯ ಜನಿಸಿದ ಮಕ್ಕಳು ಬಹಳ ಬೇಗ ಸೋಂಕಿಗೆ ಒಳಗಾಗುತ್ತಾರೆ. ಕೆಲವು ಪ್ರಕರಣಗಳಲ್ಲಿ ಗರ್ಭಾವಸ್ಥೆಯಲ್ಲಿ ಆಗುವ ತೊಂದರೆಗಳಿಂದಾಗಿ ಮಕ್ಕಳು ಬೇಗ ಜನಿಸುವ ಸಾಧ್ಯತೆ ಇರುತ್ತದೆ.  ಇಂಥಹ ಮಕ್ಕಳನ್ನ ಅಪಾಯದಿಂದ ಪಾರು ಮಾಡಿ ಅವರಿಗೆ ಅಗತ್ಯ ಚಿಕಿತ್ಸೆ ನೀಡಿ ಅವರನ್ನ ಆರೋಗ್ಯಪೂರ್ಣಗೊಳಿಸುವಲ್ಲಿ ರೈನ್ ಬೋ ಯಶಸ್ವಿಯಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos