ರೈತರು ಮಳೆಗಾಗಿ ಸಪ್ತಾಹ ಕಾರ್ಯಕ್ರಮ

ರೈತರು ಮಳೆಗಾಗಿ ಸಪ್ತಾಹ ಕಾರ್ಯಕ್ರಮ

 

ಬೀದರ, ಜು. 16: ರಾಜ್ಯದಲ್ಲಿ ಮಳೆ ಬರದ ಕಾರಣ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದಲ್ಲಿ ರೈತರು ಮಳೆಗಾಗಿ ಸಪ್ತಾಹ ಕಾರ್ಯಕ್ರಮ ಮಾಡಲಾಯಿತು.

ಸಾರ್ವಜನಿಕರು ಮತ್ತು ಯುವಕರು ಸೇರಿದಂತೆ ಮಳೆಗಾಗಿ ಗ್ರಾಮದ ಜ್ಯೆ ಹನುಮಾನ ಮಂದಿರದಲ್ಲಿ 7 ದಿನಗಳ ಕಾಲ ಸಪ್ತಾಹ ಕಾರ್ಯಕ್ರಮ ಮಾಡಿ ಕೊನೆಯ ದಿನವಾದ ಇಂದು ಹನುಮಾನ ದೇವರ ಪೋಟೋ ತೆಗೆದುಕೊಂಡು ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಭಜನೆ ಹಾಗೂ ಭಾಜಾ ಭಜಂತ್ರಿ ಗಳೊಂದಿಗೆ ಗ್ರಾಮದ ಎಲ್ಲಾ ಮಂದಿರಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ಸಾಯಂಕಾಲ ಶರಣ ದಂಪತಿಗಳಾದ ನಿರ್ಮಲಾ ಗುಂಡಪ್ಪಾ ಪಾಟೀಲ್ ಇವರಿಂದ ಅನ್ನ ದಾಸೋಹ ಕಾರ್ಯಕ್ರಮ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಕಾಶಿರಾಮ ಮಾನಕರಿ, ಶಿವನಾಥ ಮಹಾಗಾವೆ, ರಾಜಕುಮಾರ ಮಾನೆ, ಶರಣಪ್ಪಾ ಅಳ್ಳೆ, ಮಹೇಶ್ ಸಜ್ಜನಶೇಟ್ಟಿ, ಜಗನ್ನಾಥ ಬಾದಲಗಾವೆ, ಶಾಂತವಿರ ವಾರದ, ಲಕ್ಷಣ ಹಳನೋರೆ, ಭೀಮಣ್ಣಾ ಪಾಟೀಲ್,  ಅಂಬುಲಾಲ ರಾಜಪೂತ, ಪಪುಲಾಲ ಶಕ್ಲಾ,  ಬಸವರಾಜ ಬಿರಾದಾರ, ದೇವಿದಾಸ ಹಳನೋರೆ, ದ್ಯೆವತಾಬಾಯಿ, ರೇಣುಕಾ, ಆಶಾಬಾಯಿ, ಅಂಜನಾಬಾಯಿ .ಭಾರತಬಾಯಿ, ಜ್ಯೋತಿ ಮಾನೆ,  ಶಾಮಾಬಾಯಿ ಮಾನೆ, ಕಾವೇರಿ,  ಶಾಮಾಬಾಯಿ ಬಿರಾದಾರ, ಇವರೆಲ್ಲರೂ ಸೇರಿ ಭಜನೆ ಮಾಡಿ ಮಳೆ ರಾಯಗೆ ಆರಾಧನೆ ಮಾಡಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos