ಮಹಿಕಾ ಶರ್ಮಾ ರಾಹುಲ್ ಗಾಂಧಿಯನ್ನು ಪ್ರೀತಿಸುವುದಕ್ಕೆ ಕಾರಣ…

ಮಹಿಕಾ ಶರ್ಮಾ ರಾಹುಲ್ ಗಾಂಧಿಯನ್ನು ಪ್ರೀತಿಸುವುದಕ್ಕೆ ಕಾರಣ…

ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್:  ಬಾಲಿವುಡ್ ನಟಿ, ರೂಪದರ್ಶಿಯೊಬ್ಬಳು  ತಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರೀತಿಸುತ್ತೇನೆ  ಎಂದು ಪ್ರಕಟಿಸುವ ಮೂಲಕ ಬಿರುಗಾಳಿ ಎಬ್ಬಿಸಿದ್ದಾರೆ. ನಟಿ ಮಹಿಕಾ ಶರ್ಮಾ ಈ ಕುರಿತು ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾಳೆ. ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಕಾ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ರಾಹುಲ್ ಜೊತೆ ತಮ್ಮ ಫೋಟೋವನ್ನು ಹರಿಬಿಟ್ಟಿರುವ ಮಹಿಕಾ ಶರ್ಮಾ ತಾನು ರಾಹುಲ್ ಅನ್ನು ಪ್ರೀತಿಸುತ್ತಿರುವುದರ ಕಾರಣ ಸಹ ನೀಡಿದ್ದಾರೆ. “ರಾಹುಲ್ ಗಾಂಧಿಗೆ ವಿಚಿತ್ರ ಮಾತುಗಳಿಂದ ಜನರನ್ನು ನಗಿಸುವ ಗುಣವಿದೆ. ಇದಕ್ಕಾಗಿ ನಾನು ರಾಹುಲ್ ಅವರನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.” ರಾಜನಾದವ ತನ್ನ ಪ್ರಜೆಗಳನ್ನು ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳಬೇಕಾದದ್ದು ಧರ್ಮ.ಆ ಗುಣ ರಾಹುಲ್ ಅವರಲ್ಲಿದೆ” ಎಂದು ಮಹಿಕಾ ಬರೆದುಕೊಂಡಿದ್ದಾರೆ. ನಟಿ ಮಹಿಕಾ ಅವರ ಈ ಹೇಳಿಕೆ ಹಾಗೂ ಭಾವಚಿತ್ರಗಳು ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ಅಲ್ಲದೆ ಈ ಪೋಸ್ಟ್ ಸಹ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಮಹಿಕಾ ಸಂದೇಶದ ಕುರಿತು ಪರ, ವಿರೋಧ ಚರ್ಚೆಗಳು ನಡೆದಿದೆ. ಒಟ್ಟಿನಲ್ಲಿ ಈ ಸುದ್ದಿ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ರಾಹುಲ್ ಗಾಂಧಿ  ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos