ರಾಹುಲ್- ಹಾರ್ದಿಕ್ ಪಾಂಡ್ಯಾಗೆ ತಲಾ 20 ಲಕ್ಷ ದಂಡ.!

ರಾಹುಲ್- ಹಾರ್ದಿಕ್ ಪಾಂಡ್ಯಾಗೆ ತಲಾ 20 ಲಕ್ಷ ದಂಡ.!

ನವದೆಹಲಿ, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ, ಟೀಂ ಇಂಡಿಯಾ ಆಟಗಾರರಾದ ಕೆ.ಎಲ್ ರಾಹುಲ್-ಹಾರ್ದಿಕ್ ಪಾಂಡ್ಯಾಗೆ ಸುಪ್ರಿಂಕೋರ್ಟ್ ತಲಾ 20ಲಕ್ಷ ರೂ. ದಂಡ ವಿಧಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಬಿಸಿಸಿಐನ ಸುಪ್ರಿಂ ಕೋರ್ಟ್ ನೇಮಿತ ತನಿಖಾಧಿಕಾರಿ ಡಿಕೆ ಜೈನ್, ನಿಯಮ 41(1)ಸಿ ಉಲ್ಲಂಘಿಸಿದ್ದಿಂದ ಈ ಶಿಕ್ಷೆ ವಿಧಿಸಿದ್ದಾರೆ. 20 ಲಕ್ಷದಲ್ಲಿ 10 ಲಕ್ಷವನ್ನ ಈ ಇಬ್ಬರಿಗೆ ಮೃತ ಸೈನಿಕರ ಪತ್ನಿಯರಿಗೆ ತಲಾ 1 ಲಕ್ಷ ಹಾಗೂ ಅಂಧರ ಕ್ರಿಕೆಟ್ ಸಂಸ್ಥೆಗೆ 10 ಲಕ್ಷ ನೀಡುವಂತೆ ಸೂಚಿಸಿದ್ದಾರೆ. 4 ವಾರದೊಳಗೆ ಈ ದಂಡ ಮೊತ್ತವನ್ನ ಪಾವತಿಸುವಂತೆ ಆದೇಶಿಸಿದ್ದಾರೆ. ಒಂದು ವೇಳೆ 4 ವಾರದೊಳಗೆ ದಂಡ ಪಾವತಿಸದಿದ್ದಲ್ಲಿ ಪಂದ್ಯದ ಸಂಭಾವನೆಯಲ್ಲಿ ಕಡಿತಗೊಳಿಸುವಂತೆ ಬಸಿಸಿಐಗೆ ಸೂಚಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos