ಹಿರಿಯ ನಟ ರಾಧಾ ರವಿ ಡಿಎಂಕೆಯಿಂದ ಉಚ್ಚಾಟನೆ!

ಹಿರಿಯ ನಟ ರಾಧಾ ರವಿ ಡಿಎಂಕೆಯಿಂದ ಉಚ್ಚಾಟನೆ!

ಚೆನ್ನೈ, ಮಾ.25, ನ್ಯೂಸ್ ಎಕ್ಸ್ ಪ್ರೆಸ್: ಬಹುಭಾಷಾ ನಟಿ ನಯನತಾರಾ ಬಗ್ಗೆ ಕೀಳಾಗಿ ಮಾತನಾಡಿದ ಆರೋಪದ ಮೇಲೆ ಹಿರಿಯ ನಟ ರಾಧಾ ರವಿ ಅವರನ್ನು ಡಿಎಂಕೆ ಪಕ್ಷ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ.

ನಟಿ ನಯನತಾರ ಅಭಿನಯದ‌ ‘ಕೊಳಿಯುತಿರ್ ಕಾಲಮ್’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಧಾರವಿ ಅವರು, “ಆಕೆ ಒಳ್ಳೆ ನಟಿನೇ ಆದರೂ ಸೂಪರ್ ಸ್ಟಾರ್ ಎಂದು ಎಮ್​.ಜಿ.ಆರ್ ಮತ್ತು ಶಿವಾಜಿ ಗಣೇಶನ್ ಅವರ ಜತೆ ಹೋಲಿಕೆ ಮಾಡುವುದು ಎಷ್ಟು ಸರಿ. ನಯನತಾರ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಆ ಕಡೆ ಸೀತೆಯ ಪಾತ್ರದಲ್ಲೂ ನಟಿಸಿದ್ದಾರೆ. ಮೊದಲು ದೇವರ ಪಾತ್ರ ಅಂದರೆ ಕೆ.ಆರ್.ವಿಜಯ ತುಂಬಾ ಪ್ರಖ್ಯಾತಿಯಾಗಿದ್ದರು. ಅವರನ್ನು ಮಾತ್ರ ಅಂಥ ಪಾತ್ರಗಳಿಗೆ ತೆಗೆದುಕೊಳುತ್ತಿದ್ದರು. ಆದರೆ, ಇಂದು ಯಾರಿಗೆ ಬೇಕಾದರೂ ಅವರ ಹತ್ತಿರವೇ ದೇವತೆಯರ ಪಾತ್ರಗಳನ್ನು ಮಾಡಿಸುತ್ತಿದ್ದಾರೆ. ನಯನತಾರರನ್ನು ನೋಡಿದರೆ ದೆವ್ವಗಳು ಕೂಡ ಓಡಿ ಹೋಗುತ್ತವೆ ಎಂದು” ಹೇಳಿದ್ದರು.

ಈ ಹೇಳಿಕೆ ಸದ್ಯ ತಮಿಳು ಚಿತ್ರರಂಗದ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ಈಗಲೂ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಎಂಕೆ ನಟನ ವಿರುದ್ಧ ಕ್ರಮ ಕೈಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos