40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ರಚಿತಾ ರಾಮ್‌

40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ರಚಿತಾ ರಾಮ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ 40 ದಾಟಿದ ಮಹಿಳೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ನಟಿ ರಚಿತಾ ರಾಮ್‌ ವಿಜಯ್ ಹಾಗೂ ಜಡೇಶ್ ಕಾಂಬಿನೇಷನ್‌ನಲ್ಲಿ ಬಣ್ಣ ಹಚ್ಚುತ್ತಿದ್ದು, ಈ ಸಿನಿಮಾ ನಟಿ ರಚಿತಾ ರಾಮ್‌ ಅವರಿಗೆ ವಿಶೇಷವಾದ ಪಾತ್ರವಾಗಿದೆ.

ನಿರ್ದೇಶಕ ಜಡೇಶ್ “ರಚಿತಾ ಮೇಡಂಗೆ ನಾನು ಕಥೆ ಹೇಳಿದಾಗ ತುಂಬಾನೇ ಇಷ್ಟ ಪಟ್ಟರು. ನನಗೆ ಮೊದಲು ಭಯವಿತ್ತು. ಹೀರೋ ಸರ್ 50 ವರ್ಷ ಆಗಿದೆ ಅಂದರೆ, ರಚಿತಾ ಮೇಡಂಗೆ 40 ಪ್ಲಸ್ ಇದ್ದೇ ಇರುತ್ತೆ. ಇಂತಹದ್ದೇ ಹಳ್ಳಿ, ಕಲ್ಟ್ ಪಾತ್ರವನ್ನು ಅವರು ಮಾಡಿಲ್ಲ ಅಂತ ನಾನು ಅಪ್ರೋಚ್ ಮಾಡಿದೆ. ಅವರೂ ಬೆಸ್ಟ್ ಕ್ಯಾರೆಕ್ಟರ್ ಇರುವಂತಹ ಪಾತ್ರ ಮಾಡಬೇಕು ಅನ್ನೋ ಆಲೋಚನೆಯಲ್ಲಿ ಇದ್ದರು.” ಎಂದು ಹೇಳಿದರು. “ನಾನು ಈ ಪಾತ್ರವನ್ನು ಮಾಡೇ ಮಾಡುತ್ತೇನೆ ಅಂತ ಮಾತು ಕೊಟ್ಟರು. ಆ ಮಾತಿನಂತೆ ಇದ್ದಾರೆ” ಎಂದು ಮಾತನಾಡಿದ್ದಾರೆ.

ಸದ್ಯ ಡಿಂಪಲ್‌ ಕ್ವೀನ್‌ ಫ್ಯಾನ್ಸ್‌ ರಚಿತಾ ನಟಿಸುತ್ತಿರುವ ಎರಡು ಸಿನಿಮಾಗಳಿಗಾಗಿ ಕಾತುರದಿಂದ ಎದುರು ನೋಡುತ್ತಾ ಇದ್ದಾರೆ. ಒಂದು ‘ಸಂಜು ವೆಡ್ಸ್ ಗೀತಾ 2’ ಚಿತ್ರವಾದರೇ, ಇನ್ನೊಂದು ದುನಿಯಾ ವಿಜಯ್‌ ಹಾಗೂ ಕಾಟೇರ ಜಡೇಶ್‌ ಕಾಂಬೋದ ಸಿನಿಮಾ. ಇನ್ನೇನು ರಚಿತಾ ಕಲ್ಟ್ ರೋಲ್‌ನಲ್ಲಿ ಯಾವ ರೀತಿ ಅಭಿನಯಿಸಲಿದ್ದಾರೆ, ಹೇಗೆ ಕಾಣಿಸಿಕೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕು.

ಫ್ರೆಶ್ ನ್ಯೂಸ್

Latest Posts

Featured Videos