ಹೆಲಿಕಾಪ್ಟರ್ ಅಪಘಾತ; ನೇಪಾಳ ಪ್ರವಾಸೋದ್ಯಮ ಸಚಿವ ಸೇರಿ 7 ಜನರ ಸಾವು

ಹೆಲಿಕಾಪ್ಟರ್ ಅಪಘಾತ; ನೇಪಾಳ ಪ್ರವಾಸೋದ್ಯಮ ಸಚಿವ ಸೇರಿ 7 ಜನರ ಸಾವು

ಕಾಠ್ಮಂಡು, ನ್ಯೂಸ್‍ ಎಕ್ಸ್‍ ಪ್ರೆಸ್‍, ಫೆ.27: ನೇಪಾಳದ ಪ್ರವಾಸೋದ್ಯಮ ಸಚಿವ ರಬೀಂದ್ರಾ ಅಧಿಕಾರಿ ಸೇರಿದಂತೆ 7 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬುಧವಾರ ಅಪಘಾತಕ್ಕೀಡಾಗಿದ್ದು, ಏಳು ಮಂದಿ ಸಾವನ್ನಪ್ಪಿರುವುದಾಗಿ ಎಎನ್ ಐ ವರದಿ ಮಾಡಿದೆ.

ನೇಪಾಳದ ಟೆಹ್ರಾಥೂಮ್ ಜಿಲ್ಲೆಯಲ್ಲಿ
ಈ ದುರಂತ ಸಂಭವಿಸಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಏರ್ ಡೈನಾಸ್ಟಿ
ಹೆಲಿಕಾಪ್ಟರ್ ನಲ್ಲಿ ಸಚಿವ ಅಧಿಕಾರಿ, ಏರ್ ಲೈನ್ಸ್ ಉದ್ಯಮಿ ಆಯಂಗ್ ತ್ಸೆರಿಂಗ್ ಶೆರ್ಪಾ, ಯುವರಾಜ್
ದಹಾಲ್ ಹಾಗೂ ಪೈಲಟ್ ಸೇರಿದಂತೆ ಏಳು ಮಂದಿಯೂ ಸಾವಿಗೀಡಾಗಿರುವುದಾಗಿ ಹಿಮಾಲಯನ್ ಟೈಮ್ಸ್ ಹೇಳಿದೆ.

ಹೆಲಿಕಾಪ್ಟರ್ ನಾಪತ್ತೆಯಾದ ಕೆಲವೇ
ಹೊತ್ತಿನಲ್ಲಿ ಪಾಥಿಬಾರಾ ಪ್ರದೇಶದ ಸ್ಥಳೀಯರು ಅಪಘಾತ ಸಂಭವಿಸಿದ ಸ್ಥಳದಲ್ಲಿ ದೊಡ್ಡ ಪ್ರಮಾಣದ ಬೆಂಕಿ
ಹೊತ್ತಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರವಾಸೋದ್ಯಮ ಸಚಿವರು ತಮ್ಮ ಇಲಾಖೆಯ
ಅಧಿಕಾರಿಗಳ ಜತೆ ಪಾಥಿಬಾರಾ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟಿದ್ದರು. ಅಲ್ಲದೇ ಚುಹಾನ್ ದಾಂಡಾ ವಿಮಾನ
ನಿಲ್ದಾಣ ಕಾಮಗಾರಿ ಪರಿಶೀಲನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿ ವಿವರಿಸಿದೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ತೆರಳಿ
ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನೇಪಾಳ ಪ್ರಧಾನಿ ತುರ್ತು ಸಭೆ ನಡೆಸಿ, ತನಿಖೆಗೆ ಆದೇಶ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos