ರಾಜಕಾಲುವೆಗೆ ರಾಸಾಯನಿಕ ಮಿಶ್ರಿತ ನೀರು!

ರಾಜಕಾಲುವೆಗೆ ರಾಸಾಯನಿಕ ಮಿಶ್ರಿತ ನೀರು!

ನಾಯಂಡನಹಳ್ಳಿ, ಜು. 15 : ಟ್ಯಾಂಕರ್ ಮೂಲಕ  ರಾಜಕಾಲುವೆಗೆ ರಾಸಾಯನಿಕ ಮಿಶ್ರಿತ ನೀರು  ಹರಿಸುತ್ತಿದ್ದ ಚಲಕನನ್ನ ಮಹಿಳೆಯೊಬ್ಬರು ಪೋಲಿರ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಸುತ್ತಮುತ್ತಲಿನ ಕಾರ್ಖಾನೆಗಳ ವಿಷ ಮಿಶ್ರಿತ ರಾಸಾಯನಿಕ ನೀರನ್ನು ಟ್ಯಾಂಕರ್ ಮೂಲಕ ರಾಜಕಾಲುವೆಗಳಿ ತಂದು ಸುರಿಯಲು ಕಾರ್ಖಾನೆಗಳು ಕಾರಣ ಎಂದು ಮಹಿಳೆ ದೂರಿದ್ದಾರೆ.

ಭೀಮಪುತ್ರಿ ಬ್ರಿಗೇಡ್ ಮಹಿಳಾ ಸಂಘಟನೆ ಅಧ್ಯಕ್ಷೆ ಬಿ. ಡ ರೇವತಿ ರಾಜ್ ದೂರಿದ್ದಾರೆ.

ಪ್ರತಿ ದಿನ ನಾನು ಓಡಾಡುವ ರಸ್ತೆಯಲ್ಲಿ ವಾಸನೆ ಬರುತಿದ್ದ ಕಾರಣ ಮೆಟ್ರೊ ಕೆಲಸಗಾರರನ್ನ ವಿಚಾರಣೆ ಮಾಡಿದಾಗ, ಟ್ಯಾಂಕರ್ ಒಂದರಲ್ಲಿ ಪ್ರತಿದಿನ ಕೆಮಿಕಲ್ ನೀರನ್ನು ಬಿಟ್ಟು ಹೋಗುವುದಾಗಿ ಮಾಹಿತಿ ಪಡೆದು ಕೊಂಡಿದ್ದರು.

ಕಳೆದ ಮೂರ್ನಾಲ್ಕು ದಿನಗಳ ಕಾಲ ರೇವತಿ ಮತ್ತು ಅವರ ತಂಡ  ಶೋಧಿಸಿದರು ಪ್ರಯೋಜನವಾಗಲಿಲ್ಲ.

ಜುಲೈ 5 ರಂದು ಬೆಳಗಿನ ಜಾವ 3- 30 ಗಂಟೆಗೆ ಟ್ಯಾಂಕರ್ ಒಂದು  ಪೈಪ್ ಮೂಲಕ ರಾಸಾಯನಿಕ ಮಿಶ್ರಿತ ನೀರನ್ನು ರಾಜಕಾಲುವೆಗೆ ಬಿಡಲು ಮುಂದಾದ ಚಾಲಕನ್ನು ಪರಾರಿಯಾಗಲು ಯತ್ನ ಆದರೂ ಚಲ ಬಿಡದ ಮಹಿಳಾ ತಂಡ ಆತನನ್ನ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ರಾಜಕಾಲುವೆಗೆ ನೀರು ಹರಿಸತ್ತಿದ್ದನ್ನು ವಿಡಿಯೋ ಚಿತ್ರಿಕರಣ ಮಾಡಿದ್ದ ರೇವತಿ ಅವರು ಚಿತ್ರಿಕರಣವ್ವನ್ನುಇಂದು ಪೋಲೀಸರಿಗೆ ದೂರಿನೊಂದಿಗೆ ನೀಡಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯ ನೀರಿನ್ನು ಟ್ಯಾಂಕರ್ ಮೂಲಕ ತಂದು ರಾಜಕಾಲುವೆಗಳಿಗೆ ಬಿಡುತ್ತಿದ್ದುದಾಗಿ ಬಂಧಿತ ಆರೋಪಿ ಕೃಷ್ಣ ಪೋಲಿಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ

ಫ್ರೆಶ್ ನ್ಯೂಸ್

Latest Posts

Featured Videos