‘ಪುಟಾಣಿ ಪಂಟರ್ಸ್’ ನಿರ್ಮಾಪಕಿಯಾಗಿ ನಟಿ ಮೇಘನಾ ರಾಜ್!

‘ಪುಟಾಣಿ ಪಂಟರ್ಸ್’ ನಿರ್ಮಾಪಕಿಯಾಗಿ ನಟಿ ಮೇಘನಾ ರಾಜ್!

ಬೆಂಗಳೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್:  ನಟ ಚಿರಂಜೀವಿ ಸರ್ಜಾ ಮಡದಿ ಮೇಘನಾ ರಾಜ್​ ಮದುವೆ ನಂತರ ಮೊನ್ನೆಯಷ್ಟೆ ಹೊಸ ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಇದೀಗ ತಮ್ಮ ಸಿನಿ ಕೆರಿಯರ್​​ನಲ್ಲಿ ಹೊಸ ಹೆಜ್ಜೆ ಇರಿಸಿದ್ದಾರೆ ಈ ರಾಜಾಹುಲಿ ಚೆಲುವೆ. ಮೇಘನಾ ರಾಜ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇಂದು ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸೆಟ್ಟೇರುತ್ತಿರುವ ‘ಪುಟಾಣಿ ಪಂಟರ್ಸ್’ ಚಿತ್ರದ ನಿರ್ಮಾಪಕಿಯಾಗಿದ್ದಾರೆ. ಮೇಘನ ರಾಜ್ ಬಾಲ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅಪ್ಪನ (ನಟ ಸುಂದರ್​ ರಾಜ್​​) ಜೊತೆ ನಾಟಕಗಳಲ್ಲೂ ಸಹ ಅಭಿನಯ ಮಾಡಿ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಫಸ್ಟ್​ ಟೈಮ್​ ಚಿತ್ರ ನಿರ್ಮಾಣಕ್ಕೂ ಅಣಿಯಾಗಿದ್ದಾರೆ. ಮೇಘನ ರಾಜ್ ಜೊತೆ ಐವರು ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಈ ಚಿತ್ರ ‘ಪುಟಾಣಿ ಪಂಟರ್ಸ್’ ಬಡತನ, ಶಿಕ್ಷಣ, ಸಾಧನೆ ಸುತ್ತ ಜರುಗುವ ಘಟನೆಗಳು. ವಸಂತ್ ಕುಮಾರ್ ಎಲ್. ಎನ್ ಸಂಗೀತ, ಮೀರಾ ಬಿ.ಎಸ್ ಗೀತ ರಚನೆ ಮಾಡಿದ್ದಾರೆ. ಡಿ.ಕುಮಾರ್ ಕೆರಗೊಡು ಸಂಭಾಷಣೆ ರಚಿಸಿದ್ದಾರೆ. ಹೆಸರಾಂತ ನಗೆ ನಟ ‘ಮಜಾ ಟಾಕೀಸ್’ನ ಪವನ್ ಕುಮಾರ್​ ಈ ಚಿತ್ರದ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ಪವನ್ ಕಿರು ತೆರೆಯಲ್ಲಿ ಹೆಚ್ಚು ಪ್ರಸಿದ್ದಿ, ಕನ್ನಡದ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ನಟಿಸಿದ್ದಾರೆ. ಈಗ ಚುರುಕು ಪುಟಾಣಿಗಳನ್ನು ಇಟ್ಟುಕೊಂಡು ಸಿನಿಮಾ ನಿರ್ದೇಶನಕ್ಕೆ ಕಾಲಿಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos