ಪೂರನ್ ಬದುಕಿದ್ದು ಪವಾಡ

ಪೂರನ್ ಬದುಕಿದ್ದು ಪವಾಡ

ಕಟಕ್, ಡಿ. 24 : ಮನುಷ್ಯನ ಜೀವನದಲ್ಲಿ ಯಾವಾಗ, ಎಲ್ಲಿ, ಹೇಗಾಗುತ್ತದೆ ಎಂದು ಹೇಳುವುದೇ ಕಷ್ಟ. ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ ಯಾವುದೊ ಒಂದು ಕ್ಷಣದಲ್ಲಿ ಹಠಾತ್ ನಡೆಯಬಾರದ ದುರ್ಘಟನೆ ನಡೆದಿರುತ್ತದೆ. ಅಂತಹ ನೋವಿನ ಸನ್ನಿವೇಶವೊಂದು ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಜೀವನದಲ್ಲೂ ನಡೆದಿದೆ.
ಹೌದು, 2015ರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಪೂರನ್ ಸಿಲುಕಿ ಪವಾಡ ರೀತಿಯಲ್ಲಿ ಬದುಕಿದ್ದರು. ಎರಡೂ ಕಾಲುಗಳು ಮುರಿದಿದ್ದವು. ಪೂರನ್ ಕೆಲವು ದಿನಗಳು ಆಸ್ಪತ್ರೆಯಲ್ಲೇ ಕಳೆದರು. ಹೀಗಿದ್ದರೂ ನಿಕೋಲಸ್ ಪೂರನ್ ಹೆದರಲಿಲ್ಲ. 6 ತಿಂಗಳು ಕ್ರಿಕೆಟ್ ನಿಂದ ದೂರು ಉಳಿದಿದ್ದರು. ಕಠಿಣ ಅಭ್ಯಾಸ ಮೂಲಕ ಮತ್ತೆ ಮರಳಿ ಕ್ರಿಕೆಟ್ಗೆ ವಾಪಸ್ ಬಂದರು.
ಹಿಂದಿಗಿಂತಲೂ ಚೆನ್ನಾಗಿಯೇ ಆಡಿದರು. ಸದ್ಯ ಭಾರತ ವಿರುದ್ಧ ವಿಂಡೀಸ್ ಏಕದಿನ ಸರಣಿ ಸೋಲು ಅನುಭವಿಸಿದೆ. ಆದರೆ ಪೂರನ್ ಬ್ಯಾಟಿಂಗ್ನಿಂದ ಹರಿದ ರನ್ಗಳಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ 23 ಎಸೆತಕ್ಕೆ 29 ರನ್, 2ನೇ ಪಂದ್ಯದಲ್ಲಿ 47 ಎಸೆತಕ್ಕೆ 75 ರನ್ ಹಾಗೂ 3ನೇ ಪಂದ್ಯದಲ್ಲಿ 64 ಎಸೆತಕ್ಕೆ 89 ರನ್ ಬಾರಿಸಿ ಅಬ್ಬರಿಸಿದ್ದಾರೆ.
ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪೂರನ್ ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತಾ ಹಿಂದಿನ ದಿನಗಳನ್ನು ನೆನೆದರು. ಅಪಘಾತದ ನಂತರ ಬಹುತೇಕ ಕ್ರಿಕೆಟ್ ಜೀವನವೇ ಮುಗಿದ ಅನುಭವ ಆಗಿತ್ತಂತೆ. ಆದರೆ ವಿಂಡೀಸ್ ತಂಡದ ಹಾಲಿ ನಾಯಕ ಕೈರನ್ ಪೊಲಾರ್ಡ್ ಬೆಂಬಲದಿಂದ ಇಂದು ಮತ್ತೆ ತಂಡದಲ್ಲಿ ಸ್ಥಾನ ಪಡೆದು ಕೊಳ್ಳಲು ಸಾಧ್ಯವಾಯಿತು ಎಂದು ಪೂರನ್ ಹೇಳಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos