ಪುನೀತ್ ನಿರ್ಮಿಸುತ್ತಿದ್ದಾರೆ ಹೊಸ ಸಿನಿಮಾ!

ಪುನೀತ್ ನಿರ್ಮಿಸುತ್ತಿದ್ದಾರೆ ಹೊಸ ಸಿನಿಮಾ!

ಸಿನಿಮಾ ರಂಗದಲ್ಲಿ ಹಾರರ್, ಕಾಮಿಡಿ, ಡ್ರಾಮಾ, ಫ್ಯಾಂಟಸಿ ಸೇರಿದಂತೆ ನಾನಾ ಪ್ರಕಾರಗಳಿವೆ. ಇದೀಗ ಇದಕ್ಕೆ ಇನ್ನೊಂದು ಜೋಡಣೆ ಮೆಡಿಕಲ್ ಥ್ರಿಲ್ಲರ್.

ಆಗ ಉಪೇಂದ್ರ ‘H2o’ ಎಂಬ ವಿಭಿನ್ನ ಶೀರ್ಷಿಕೆ ಇಟ್ಟು ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮೆಡಿಕಲ್ ಥ್ರಿಲ್ಲರ್ ಎಂಬ ವಿಭಿನ್ನ ಶೈಲಿಯಲ್ಲಿ ‘02’ ಎಂಬ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಮಾಯಾಬಜಾರ್ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ಅವರು ಸಿನಿಮಾದ ನಿರ್ಮಾಣದಲ್ಲಿ ತೊಡಗಿದ್ದಾರೆ. ಪ್ರಶಾಂತ್ ರಾಜ್ ಹಾಗೂ ರಾಘವ್ ಎಂಬುವರು ಈ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.  ತಮ್ಮದೇ ಪಿಆರ್‍ಕೆ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ‘02’ ಸಿನಿಮಾ ಮೂಡಿ ಬರಲಿದ್ದು, ಬಹುತೇಕ ನಟರು ಫೈನಲ್ ಆಗಿದ್ದಾರೆ. ಹೊಸಬರಿಗೆ ಅವಕಾಶ ನೀಡಿರುವುದು ಈ ಸಿನಿಮಾದ ಹೆಗ್ಗಳಿಕೆ.

ಪಿಆರ್‍ಕೆ ಪ್ರೊಡಕ್ಷನ್ಸ್ ಈ ಹಿಂದೆ ಮಾಯಾ ಬಜಾರ್, ಕವಲು ದಾರಿ, ಫ್ರಂಚ್ ಬಿರಿಯಾನಿ, ಲಾ, ಫ್ಯಾಮಿಲಿ ಪ್ಯಾಕ್ ಸಿನಿಮಾಗಳಿಗೆ ಅವಕಾಶ ನೀಡಿದ್ದರು. ಇದರಲ್ಲಿ ಲಾ, ಫ್ಯಾಮಿಲಿ ಪ್ಯಾಕ್ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

ಫ್ರೆಶ್ ನ್ಯೂಸ್

Latest Posts

Featured Videos