ಪಿ.ಎಸ್.ಐ. ಕಂಡ್ರೆ ಜನ ಪರಾರಿ

ಪಿ.ಎಸ್.ಐ. ಕಂಡ್ರೆ ಜನ ಪರಾರಿ

ಕೊಟ್ಟೂರು :ಏ,6: ಕರೋನಾ ವೈರಸ್ ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಿದ್ದರು ಜನ ಹೊರಗಡೆ ಓಡಾಡುವುದನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಹಗಲು ರಾತ್ರಿ ಎನ್ನದೇ ಹರಸಾಹಸ ಪಡುತ್ತಿದ್ದಾರೆ.
ಇಲ್ಲಿನ ಪಿ.ಎಸ್.ಐ. ಕಾಳಿಂಗರವರು ದಿನಂಪ್ರತಿ ಜನರನ್ನು ಮನೆಯಲ್ಲಿಯೇ ಇರುವಂತೆ ಎಚ್ಚರಿಸುತ್ತಾ ಯಾರು ಹೊರಗಡೆ ಬರದಂತೆ ತಿಳಿಸುತ್ತಾರೆ. ಅವರನ್ನು ಕಂಡರೆ ಸಾಕು ಕೂಡಲೇ ಜನ ಓಡಿ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ. ಸಂಜೆಯಾಗುತ್ತಿದ್ದAತೆ ಶಿಸ್ತುಬದ್ದ ಕ್ರಮವಹಿಸಿ ಭದ್ರತೆ ಒದಗಿಸುವುದರ ಜೊತೆಗೆ ಜನರು ಆರೋಗ್ಯದಿಂದರಲು ತಮ್ಮ ಕರ್ತವ್ಯದಲ್ಲಿ ನಿರತರಾಗಿ ಗಸ್ತು ತಿರುಗುತ್ತಾರೆ.
ಪಿ.ಎಸ್.ಐ. ಕಾಳಿಂಗ ರೋಡಿಗಿಳಿದರೆ ಸಾಕು ಜನರು ಪರಾರಿಯಾಗುವುದು ಖಚಿತ. ಜೀಪಿನ ಶಬ್ದ ಕೇಳಿದರೆ ಸಾಕು ಸುತ್ತಮುತ್ತಲಿನ ಗ್ರಾಮಸ್ಥರು ಸ್ತಬ್ಧರಾಗುತ್ತಾರೆ. ನಿಷ್ಟಾವಂತ ಪ್ರಮಾಣಿಕ ಖಡಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos