ಬಾರ್ ಗಳ ಮೇಲೆ ದಾಳಿ, 100 ಹುಡುಗಿಯರ ರಕ್ಷಣೆ

ಬಾರ್ ಗಳ ಮೇಲೆ ದಾಳಿ, 100 ಹುಡುಗಿಯರ ರಕ್ಷಣೆ

ಬೆಂಗಳೂರು, ಸೆ. 9: ಕಾನೂನು ಬಾಹೀರ ಚಟುವಟಿಕೆಗಳನ್ನು ನಡೆಸುತ್ತಿದ್ದ ಅಶೋಕನಗರದ ಎರಡು ಹಾಗೂ ಕಬ್ಬನ್ ಪಾಕ್೯ ನ ಒಂದು ಸೇರಿದಂತೆ ಮೂರು ಬಾರ್ ಗಳ ಮೇಲೆ ದಾಳಿ ಮಾಡಿರುವ ಕೇಂದ್ರವಿಭಾಗದ ಪೋಲಿಸರು ನೂರಕ್ಕೂ ಹೆಚ್ಚು ಯುವತಿಯರನ್ನು ರಕ್ಷಿಸಿ ಬಾರ್ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.

ಅಶೋಕನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್ ತ್ರಿ ಮೇಲೆ ದಾಳಿ ನಡೆಸಿ 67 ಮಂದಿಯನ್ನು ರಕ್ಷಿಸಿ, ಹದಿನೇಳು ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಬಾರ್ ನಲ್ಲಿದ್ದ ಇಪ್ಪತೇಳು ಮಂದಿ ಗ್ರಾಹಕರನ್ನು ಹೊರಗೆ ಕಳಿಸಿ, ತಲೆ ಮರೆಸಿಕೊಂಡಿರುವ ಮಾಲೀಕರಾದ ಸಂತೋಷ್ ಮತ್ತು ರಾಜು ಅವರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಟೈಮ್ಸ್ ಬಾರ್ ಮೇಲೆ ದಾಳಿ ನಡೆಸಿ ಇಪ್ಪತ್ತೇಳು ಮಂದಿ ಯುವತಿಯರನ್ನು ರಕ್ಷಿಸಿ, ಒಂಭತ್ತು ಗ್ರಾಹಕರನ್ನು ಹೊರಗೆ ಕಳುಹಿಸಿ ಹದಿನಾರು ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.

ತಲೆ ಮರೆಸಿಕೊಂಡಿರುವ ಮಾಲೀಕರಾದ ಮಹೇಶ್ ಮತ್ತು ಪಾಯಲ್ ಗಾಗಿ  ಪತ್ತಗೆ ಕಾರ್ಯಾಚರಣೆ ನಡೆಸುತ್ತಿರುವುದಾಗಿ  ತಿಳಿಸಿದ್ದಾರೆ.

ಕಬ್ಬನ್ ಪಾರ್ಕ್ ಡಯಟ್  ಬಾರ್ ಮೇಲೂ ದಾಳಿ

ಕಬ್ಬನ್ ಪಾರ್ಕ್ ಡಯಟ್  ಬಾರ್ ಮೇಲೂ ದಾಳಿ ಮಾಡಿರುವ ಪೋಲಿಸರು ಹದಿನೈದು ಮಂದಿ ಯುವತಿಯರನ್ನು ರಕ್ಷಿಸಿ ಇಪ್ಪತೈದು ಮಂದಿ ಗ್ರಾಹಕರನ್ನು ಹೊರಕಳಸಿ ಮೂವರು ಸಿಬ್ಬಂದಿಗಳನ್ನು ಬಂಧಿಸಲಾಗಿದೆ.

ಮೂರು ಬಾರ್ ಗಳಲ್ಲಿ ಕರ್ಕಶ ಶಬ್ದ ಮಾಲಿನ್ಯ ದೊಂದಿಗೆ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಮಾಡುತ್ತಿದ್ದರು.

ಅಬಕಾರಿ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ  ದಾಳಿ ಮಾಡಲಾಗಿದೆ ಎಂದು ತಿಳಿಸಿದರು. ಅಶೋಕನಗರದ ಮತ್ತು ಕಬ್ಬನ್ ಪಾಕ್೯ ಪೋಲಿಸರು ಜಂಟಿಯಾಗಿ ದಾಳಿ ನಡೆಸಿರುವುದಾಗಿ ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos