ಪ್ರಜಾಕೀಯ ಪಕ್ಷದ ಗುರುತು ಯಾವುದು ಗೊತ್ತ.?

ಪ್ರಜಾಕೀಯ ಪಕ್ಷದ ಗುರುತು ಯಾವುದು ಗೊತ್ತ.?

ಬೆಂಗಳಯರು,ಮಾ.28, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಈಗಾಗಲೇ ಮನೆ ಮನೆಗೆ ಹೋಗಿ ಮತದಾನವನ್ನು ಕೇಳುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಾಣೆಗೆ   ನಟ ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷವು ಕೂಟ ಈ ಬಾರಿ ಲೋಕಸಭೆ ಚುನಾವಣೆ ಕಣಕ್ಕಿಳಿಯುತ್ತಿದೆ. ಇದೀಗ ಪ್ರಜಾಕೀಯ ಪಾರ್ಟಿಯ ಸಿಂಬಲ್ ಹೊರಬಿದ್ದಿದೆ.

ಉತ್ತಮ ರಾಜಕಾರಣಕ್ಕಾಗಿ ರಾಜ್ಯದ 28ಕ್ಷೇತ್ರದಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಕೂಡ ಫೈನಲ್ ಆಗಿದೆ. ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳು ಸದ್ಯ ನಾಮಪತ್ರ ಸಲ್ಲಿಕೆಯನ್ನು ಮಾಡಿದ್ದಾರೆ.

ಇದೀಗ ಈ ಪಕ್ಷದ ಚಿನ್ಹೆ ಯಾವುದು ಅನ್ನೋದು ಬಹಿರಂಗವಾಗಿದೆ.

ಹೌದು, ಸದ್ಯ ಪ್ರಜಾಕೀಯ ಪಾರ್ಟಿಯ ಚಿನ್ಹೆ ಆಟೋ. ಮೊದಲಿಂದಲೂ ನಾನು ನಿಮ್ಮ ಕಾರ್ಮಿಕ ಅಂತಾ ಹೇಳುತ್ತಿದ್ದ ಉಪೇಂದ್ರ ಇದೀಗ ಅದೇ ತರದ ಆಯ್ಕೆಯನ್ನು ಮಾಡಿದ್ದಾರೆ. ಈ ಪ್ರಜಾಕೀಯ ಪಾರ್ಟಿಯ ಚಿನ್ಹೆ ಆಟೋವನ್ನು ಚುನಾವಣಾ ಆಯೋಗ ಉಪೇಂದ್ರ ಅವರ ಪಕ್ಷಕ್ಕೆ ನೀಡಲಾಗಿದೆ. ಸದ್ಯ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಉಪೇಂದ್ರ.

ಫ್ರೆಶ್ ನ್ಯೂಸ್

Latest Posts

Featured Videos