ಬಿಲ್ ಗೇಟ್ಸ್ ಜೊತೆ ಮೋದಿ ಸಂವಾದ

ಬಿಲ್ ಗೇಟ್ಸ್ ಜೊತೆ ಮೋದಿ ಸಂವಾದ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಖ್ಯಾತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಜತೆ ಸಂವಾದ ನಡೆಸಿದ್ದು ಈ ವೇಳೆ  ‘ನಮೋ ಡ್ರೋನ್ ದೀದಿ’ ಯೋಜನೆ ಬಗ್ಗೆ ಪ್ರಸ್ತಾಪಿಸಿದರು.

ಭಾರತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮಹಿಳೆಯರು ಹೆಚ್ಚು ಮುಕ್ತರಾಗಿದ್ದಾರೆ. ನಾನು ‘ನಮೋ ಡ್ರೋನ್ ದೀದಿ’ಯೋಜನೆಯನ್ನು ಪ್ರಾರಂಭಿಸಿದ್ದೇನೆ. ಇದು ಅತ್ಯಂತ ಯಶಸ್ವಿಯಾಗಿ ಮನ್ನಡೆಯುತ್ತಿದೆ. ಈ ಬಗ್ಗೆ ಮಹಿಳೆಯರ ಜತೆ ಸಂವಹನ ನಡೆಸಿದ್ದೇನೆ, ಅವರು ಸಂತೋಷಪಡುತ್ತಾರೆ. ಈ ಹಿಂದೆ ಸೈಕಲ್ ತುಳಿಯುವುದೇ ಕಷ್ಟ ಎನ್ನುತ್ತಿದ್ದ ಮಹಿಳೆಯರು ಈಗ ಪೈಲಟ್‌ ಗಳು ಮತ್ತು ಡ್ರೋನ್‌ಗಳನ್ನು ಹಾರಿಸಬಲ್ಲರು. ಭಾರತದಲ್ಲಿ ಮನಃಸ್ಥಿತಿ ಬದಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಭಾರತದಲ್ಲಿ ಮಹಿಳೆಯರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಕ್ತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಮೋದಿ ವ್ಯಕ್ತಪಡಿಸಿದರು.

ಬಿಲ್ ಗೇಟ್ಸ್ ಜೊತೆಗಿನ ಸಂವಾದದ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಬಿಲ್​ ಗೇಟ್ಸ್ ಜತೆಗೆ ಒಳನೋಟವುಳ್ಳ ಒಂದು ಸಂವಾದ. ದಯವಿಟ್ಟು ನೋಡಿ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos