1500 ಅಡಿಕೆ ಗಿಡ ನಾಶ ರೈತರ ಆಕ್ರಂದನ!

1500 ಅಡಿಕೆ ಗಿಡ ನಾಶ ರೈತರ ಆಕ್ರಂದನ!

ದಾವಣಗೆರೆ: ರೈತ ದೇಶದ ಬೆನ್ನೆಲುಬು ಎಂತ ಕರೆಯುತ್ತಾರೆ. ಆದರೆ ಒಂದಲ್ಲೊಂದು ಸಮಸ್ಯೆ ಗೆ ಸಿಲುಕಿ ರೈತರಿಗೆ ಬೆನ್ನೆಲುಬು ಮುರಿದುಕೊಳ್ಳಲು ಪರಿಸ್ಥಿತಿ ಎದುರಾಗುತ್ತಿದೆ. ಒಂದು ಪ್ರಕೃತಿ ಮನಸ್ಸಿಗೆ ರೈತ ಹಾಳಾದರೆ ಇನ್ನೊಂದು ಕಡೆ ಜೊತೆಗಿದ್ದ ಜನದಿಂದಲೇ ಬೆಳೆ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾವಳಿ ತಾಲೂಕಿನ  ಉತ್ತೇನಹಳ್ಳಿ ಯಲ್ಲಿ ಪಾಪಿಗಳು ಒಂದೂವರೆ ಸಾವಿರ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ. ಗುದ್ದೇನಹಳ್ಳಿ ಧರ್ಮೇಶಪ್ಪ ನಾಗಮ್ಮ ದಂಪತಿಗಳು ಎರಡು ಎಕರೆಯಲ್ಲಿ ಎರಡು ವರ್ಷಗಳಿಂದ ಒಂದೂವರೆ ಸಾವಿರ ಅಡಿಕೆ ಗಿಡಗಳನ್ನು ತಮ್ಮ ಮಕ್ಕಳಂತೆ ಸಾಕಿದ್ದರು. ನೀರು ಇಲ್ಲದ ಸಂದರ್ಭದಲ್ಲಿ ತೋಟದಲ್ಲಿ ನೀರು ತಂದು ಬಾರಿ ಕಷ್ಟಪಟ್ಟು ಗಿಡಗಳನ್ನು ಉಳಿಸಿದರು. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹೊಲದಲ್ಲಿ ಇದ್ದು ಗಿಡಗಳ ಆರೈಕೆಯನ್ನು ಮಾಡುತ್ತಿದ್ದರು. ಆದರೆ ಧೂಳರ ದೃಷ್ಟಿ ತನಕ ಇಡೀ ತೋಟ ನಾಶವಾಗಿದೆ ಕಟುಕರು ಅಷ್ಟು ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos