ಚರ್ಚೆಗೆ ಗ್ರಾಸವಾಯ್ತು ಪಿಗ್ಗಿಯ ವಿಚಿತ್ರ ಕಾಸ್ಟ್ಯೂಮ್..!

ಚರ್ಚೆಗೆ ಗ್ರಾಸವಾಯ್ತು ಪಿಗ್ಗಿಯ ವಿಚಿತ್ರ ಕಾಸ್ಟ್ಯೂಮ್..!

ಮುಂಬೈ, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಸಿನಿ‌ತಾರೆಯರ ಡ್ರೆಸ್ ಮತ್ತು ಅವರ ಸ್ಟೈಲ್ ಗಳನ್ನು ಅವರ ಫ್ಯಾನ್ಸ್ ಗಳು ಫಾಲೋ ಮಾಡೋದು ಕಾಮನ್, ಇನ್ನು ಯಾವುದಾದರು ಕಾರ್ಯಕ್ರಮಗಳಲ್ಲಿ ತಮ್ಮ ನೆಚ್ಚಿ ನ ತಾರೆಯರು ಭಾಗವಹಿಸೋ ಕಾರ್ಯಕ್ರಮದಲ್ಲಿ ಯಾವ ರೀತಿ ಉಡುಪು ಧರಿಸುತ್ತಾರೆ ಯಾವ ರೀತಿ ಕಾಣ್ತಾರೆ ಅಂತ ಕಾಯ್ತ ಇರ್ತಾರೆ. ಆದ್ರೆ ಈ ಬಾರಿ ಪ್ರಿಯಾಂಕ ಛೋಪ್ರ ತಮ್ಮ ಉಡುಪಿನಿಂದಲೇ ಟ್ರೋಲಾಗಿದ್ದಾರೆ. ಹೌದು ಪ್ರಿಯಾಂಕ ತೊಟ್ಟ ಉಡುಗೆ ಮತ್ತು ಹೇರ್ ಸ್ಟೈಲ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಅಮೇರಿಕಾದ ಖ್ಯಾತ ಫ್ಯಾಷನ್ ಶೋ ಮೆಟ್ ಗಾಲಾ 2019 ಆರಂಭವಾಗಿದ್ದು ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಖ್ಯಾತ ನಟ ನಟಿಯರು ತರಹೇವಾರಿ ಕಾಸ್ಟ್ಯೂಮ್ ಮೂಲಕ ರೆಡ್ ಕಾರ್ಪೆಟ್ ನಲ್ಲಿ ಕ್ಯಾಟ್ ವಾಕ್ ಮಾಡಲಿದ್ದಾರೆ, ಆದ್ರೆ ಮೆಟ್ ಗಾಲಾ ಶೋನಲ್ಲಿ ಭಾಗವಹಿಸಿರೋ ಪ್ರಿಯಾಂಕ‌ ಛೋಪ್ರ ಈಗ ಟ್ರೋಲ್ ಗೆ ಗುರಿಯಾಗಿದ್ದಾರೆ. ವಿಚಿತ್ರ ಸ್ಟೈಲ್ ನಲ್ಲಿ ಕಾಣಿಸಿಕೊಂಡಿರೋ ಪಿಗ್ಗಿಯನ್ನು ನೋಡಿ ಸಿನಿರಸಿಕರು ಗೇಲಿಮಾಡುತ್ತಿದ್ದಾರೆ, ಗುಂಗುರು ಕೂದಲು ಮಾಡಿಕೊಂಡು ವಿಚಿತ್ರ ಮೇಕಪ್ ಮೂಲಕ ಸಿಲ್ವರ್ ಕಲರ್ ಗೌನ್ ಹಾಕಿಕೊಂಡು‌ ಕಾರ್ಯಕ್ರಮದಲ್ಲಿ ಫೋಸ್ ಕೊಟ್ಟಿರೋ ಪಿಗ್ಗಿಯನ್ನು ನೋಡಿ ಟ್ರೋಲ್ ಗಳ ಕಣ್ಣು ಕುಕ್ಕಿದ್ದು‌ ಟ್ರೋಲ್ ಗಳು ಪಿಗ್ಗಿಯನ್ನು ಆಹಾರವಾಗಿಸಿಕೊಂಡಿದ್ದಾರೆ, ಇನ್ನು ಈ ಕಾರ್ಯಕ್ರಮದಲ್ಲಿ ಪಿಗ್ಗಿ ಜೊತೆ ತನ್ನ ಪತಿ ನಿಕ್ ಕೂಡ ರೆಡ್ ಕಾರ್ಪೆಟ್ ನಲ್ಲಿ ವಾಕ್ ಮಾಡಿದ್ದು ವಿಶೇಷವಾಗಿದ್ರೆ, ಇದೇ ಕಾರ್ಯಕ್ರಮದಲ್ಲಿ ರೆಡ್ ಗೌನ್ ತೊಟ್ಟು ದೀಪಿಕಾ ಪಡುಕೋಣೆ ಕ್ಯಾಟ್ ವಾಕ್ ಕೂಡ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos