ದಬ್ಬಾಳಿಕೆ ಆಡಿಳಿತಕ್ಕೆ ಜನತೆ ಬೇಸತ್ತಿದ್ದಾರೆ

ದಬ್ಬಾಳಿಕೆ ಆಡಿಳಿತಕ್ಕೆ ಜನತೆ ಬೇಸತ್ತಿದ್ದಾರೆ

ಪಾವಗಡ: ಕೋಟ್ಯಂತರ ಯುವಕರಿಗೆ ಉದ್ಯೋಗದ ಭರವಸೆ, ಮಹಿಳೆಯರ ಆರ್ಥಿಕ ಸಭಲತೆ, ರೈತ ಪರ ಯೋಜನೆಗಳ ಅನುಷ್ಠಾನದ ಆಮಿಷಗಳನ್ನೊಡ್ಡಿ ಪ್ರಧಾನಿ ನರೇಂದ್ರಮೋದಿ ರವರಕೇಂದ್ರ ಸರ್ಕಾರದೇಶದ ನಾಗರೀಕರನ್ನು ವಂಚಿಸಿದ್ದಾರೆ ಎಂದು ಮಾಜಿ ಎಂ.ಎಲ್‌ಸಿ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಆರೋಪಿಸಿದರು.
ಪಟ್ಟಣದ ಗುರುಭವನ ಆವರಣದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಮತಯಾಚನೆ ನಡೆಸಿ ಮಾತನಾಡಿದರು.
ದೇಶದ ಪ್ರಗತಿಯು ಆ ದೇಶದಜಿಡಿಪಿ ಆಧಾರದ ಮೇಲೆ ನಿರ್ಧರಿತವಾಗಿದ್ದು ನಮ್ಮ ದೇಶದ ಜಿಡಿಪಿ ಕುಸಿತದಿಂದಾಗಿ ಇಡೀ ದೇಶದ ಜನೆತ ಸಂಕಷ್ಟಕ್ಕೀಡಾಗುವಂತಾಗಿದೆ, ಬಿಜೆಪಿ ಸಕಾರದ ಆಡಳಿತ ವೈಪಲ್ಯದಿಂದಾಗಿ ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಿ ಬಡತನ ತಾಂಡವಾಡುತ್ತಿದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಮನಗ ಭ್ರಷ್ಠಾಚಾರಕ್ಕೆರಾಜ್ಯದಜನತೆ ಸಂಪೂರರ್ಣ ಬೇಸತ್ತಿದ್ದು, ಕಳೆದ ಒಂದೂವರೆ ವರ್ಷದಿಂದಯಾವುದೇಅಭಿವೃದ್ದಿಗೆ ಸ್ಪಂದಿಸದಬಿಜೆಪಿಯ ಸರ್ಕಾರದ ವಿರುದ್ದ ಸಮರ ಸಾರಲುದೇಶದಜನತೆ ಸಿದ್ದರಾಗಬೇಕಿದೆ ಎಂದರು.
ರಾಜ್ಯದಲ್ಲಿ ಭ್ರಷ್ಠಾಚಾರತಾಂಡವಾಡುತ್ತಿದ್ದುಅರ್ಹರಿಗೆ ನೀಡಲಾಗುತ್ತಿದ್ದ ಪಿಂಚಣಿಗಳನ್ನು ನೀಡಲೂಆಗದ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ, ಕಾಂಗ್ರೆಸ್ ಪಕ್ಷದಅವಧಿಯಲ್ಲಿಎಲ್ಲಾ ವರ್ಗದಜನರನ್ನು ಸಂರಕ್ಷಿಸಿ ಪೋಷಿಸಲು ಅನುಷ್ಠಾನಗೊಳಿಸಿದ್ದ ಎಲ್ಲಾ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದ್ದು ಕೇವಲ ತೆರಿಗೆಗಳ ಸಂಗ್ರಹಣೆಗೆ ನಿಂತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos