ಪೌರ ಕಾರ್ಮಿಕರ ಸುರಕ್ಷತೆ ಕಡ್ಡಾಯ

ಪೌರ ಕಾರ್ಮಿಕರ ಸುರಕ್ಷತೆ ಕಡ್ಡಾಯ

ಕೃಷ್ಣರಾಜಪುರ, ಜು. 17 : ಆರೋಗ್ಯ ದೃಷ್ಟಿಯಿಂದ ಪೌರ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷತೆಯ ಪರಿಕರಗಳನ್ನು ಧರಿಸಿಕೊಂಡು ಕಸ ತೆಗೆಯಬೇಕೆಂದು ಪಾಲಿಕೆ ಸದಸ್ಯೆ ಶ್ವೇತಾವಿಜಯಕುಮಾರ್ ಸಲಹೆ ನೀಡಿದರು .

ಮಹದೇವಪುರ ಕ್ಷೇತ್ರದ ದೊಡ್ಡ ನಕ್ಕುಂದಿ ವಾರ್ಡ್ ಕಚೇರಿಯಲ್ಲಿ, ಪೌರ ಕಾರ್ಮಿಕರಿಗೆ ಸುರಕ್ಷ ಪರಿಕರಗಳನ್ನು ವಿತರಿಸಿ ನಂತರ ಮಾತನಾಡಿದ ಅವರು,  ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ರಕ್ಷಾ ಕವಚಗಳನ್ನು ಧರಿಸಿಕೊಂಡು ಸ್ವಚ್ಚತೆ ಮಾಡಬೇಕು  ಎಂದು ಪೌರ ಕಾರ್ಮಿಕರಿಗೆ ಸೂಚಿಸಿದರು.

ಗುತ್ತಿಗೆದಾರರು ಪೌರ ಕಾರ್ಮಿಕರ ಬಗ್ಗೆ ಅಸಡ್ಡೆ ತೋರಿಸುತ್ತಿದ್ದಾರೆ. ಅವರು ಕಸವನ್ನು ಸುಚಗೊಳಿಸುವಾಗ ರಕ್ಷಾ ಪರಿಕರಗಳನ್ನು ತಪ್ಪದೇ ನೀಡಬೇಕು. ಇಲ್ಲದಿದ್ದರೆ ಪೌರಕಾರ್ಮಿರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು. ದೊಡ್ಡನಕ್ಕುಂದಿವಾರ್ಡ್ ಅನ್ನು ಸ್ವಚ್ಛಗೊಳಿಸಿ ಕಸಮುಕ್ತ ವಾರ್ಡ್ ನಿರ್ಮಾಣ ಮಾಡಲು ನಾಗರಿಕರು ಸಹಕರಿಸಬೇಕು, ಮನೆ ಮನೆಯಿಂದಲೇ ಹಸಿ ಮತ್ತು ಒಣ ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡುವ ಮೂಲಕ ಸಚತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

 ಖಾಲಿ ನಿವೇಶನ

ರಸ್ತೆ ಅಕ್ಕ ಪಕ್ಕದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಬಿಬಿಎಂಪಿ ಗುರುತಿಸಿರುವ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ತ್ಯಾಜ್ಯ ವನ್ನು ಹಾಕಬೇಕು ಹೇಳಿದರು. ಈ ವೇಳೆ ಪೌರಕಾರ್ಮಿಕರಿಗೆ ಮಾಸ್ಕ, ಕೈ ಚೀಲ, ಶೂ ಮತ್ತಿತರ ಪರಿಕರಗಳನ್ನು ವಿತರಿಸಲಾಯಿತು.

ಈ ಸಂದರ್ಬದಲ್ಲಿ ಕ್ಲೆಮೆಂಟ್ ಸಂಸ್ಥೆಯ ರೇಖಾ, ಪ್ರತಿಮಾ, ಕಿರಿಯ ಆರೋಗ್ಯ ಪರಿವೀಕ್ಷಕ ರಘುನಂದನ್ ಮತ್ತಿತರರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos