ರೋಗಿಗಳ ಸೇವೆ ತಂದೆ,ತಾಯಿ ಸೇವೆ ಮಾಡಿದಂತೆ

  • In State
  • January 1, 2021
  • 198 Views
ರೋಗಿಗಳ ಸೇವೆ ತಂದೆ,ತಾಯಿ ಸೇವೆ ಮಾಡಿದಂತೆ

ಚಾಮರಾಜನಗರ: ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆ ಮಾಡುವುದು ಮನೆಯಲ್ಲಿ ತಂದೆ,ತಾಯಿಗಳ ಸೇವೆ ಮಾಡಿಂದಂತೆ, ಪ್ರತಿಯೊಬ್ಬ ಶಶ್ರೂಷಕರು ಆಸ್ಪತ್ರೆಗಳಗಳಲ್ಲಿ ಅವರ ಸೇವೆ ಅನನ್ಯವಾಗಿದೆ. ಡಾಕ್ಟರ್ ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ಶುಶ್ರೂಷಕರು ಮುಂದಿನ ರೋಗಿಗಳನ್ನು ನೋಡಿಕೊಳ್ಳುವ ಕಾರ್ಯದಲ್ಲಿ ಅವರು ಭಾಗಿಯಾಗಿರುತ್ತಾರೆ ಎಂದು ಚಾಮರಾಜನಗರ ಮೆಡಿಕಲ್ ಕಾಲೇಜು ಡೀನ್ ಡಾ. ಸಂಜೀವ್ ತಿಳಿಸಿದರು.
ನಗರದ ಜಿಲ್ಲಾ ಆಸ್ಪತ್ರೆಯ ಶುಶ್ರೂಷಕರ ತರಬೇತಿ ಸಭಾಂಗಣದಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಅಧಿಕಾರಿಗಳು ಮತ್ತು ನೌಕರರಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 35 ವರ್ಷ ಒಂದೆ ತಾಲ್ಲೂಕು ಕೇಂದ್ರ ದಲ್ಲಿ ಸೇವೆ ಸಲ್ಲಿಸುವುದು ವಿಶೇಷವಾಗಿದೆ. ಯಾವುದೇ ಸರ್ಕಾರಿ ನೌಕರರು ಸೇವೆಯ ವೇಳೆಯಲ್ಲಿ ಬರುವ ವ್ಯಕ್ತಿಗಳ ಹತ್ತಿರ ನಗುವಿಂದ ಮಾತನಾಡಿದರೆ ಅವರು ಸ್ಪಂದಿಸುತ್ತಾರೆ ಎಂದು ತಿಳಿಸಿದರು.
ಕೋವೀಡ್ ಸಮಯದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಉತ್ತಮ ಸೇವೆಗಳನ್ನು ನೀಡಿದೆ. 1 ಲಕ್ಷ ಕೋವಿಡ್ ಪರೀಕ್ಷೆಗಳನ್ನು ಮಾಡಿ ರಾಜ್ಯದಲ್ಲೆ ಹೆಸರು ಗಳಿಸಿದೆ. ಮುಂದೆಯು ಎಲ್ಲಾ ನೌಕರರು ಹಿರಿಯರ ಮಾರ್ಗದರ್ಶನ ಪಡೆದು ಸೇವೆಗಳನ್ನು ನೀಡಬೇಕೆಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ್ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಇದರ ಹಿಂದೆ ವೈದ್ಯರು, ಶುಶ್ರೂಷಕರು ಮತ್ತು ನೌಕರರ ಪರಿಶ್ರಮವಿದೆ. ಯಾವುದೇ ವ್ಯಕ್ತಿ ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ನಿವೃತ್ತಿಯ ದಿನವನ್ನು ಅದರಲ್ಲಿ ಬರೆದಿರುತ್ತದೆ. ನಿವೃತ್ತಿ ಹೊಂದಿದವರು ಕುಟುಂಬದ ಜೊತೆ ಸಂತೋಷದಿಂದ ಕಳೆಯುವ ದಿನವಾಗಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos