ಪಾಕಿಸ್ತಾನದಲ್ಲಿ ಟೀ ವ್ಯಾಪಾರವನ್ನು ಹೆಚ್ಚಿಸಿದ ಅಭಿನಂದನ್!

ಪಾಕಿಸ್ತಾನದಲ್ಲಿ ಟೀ ವ್ಯಾಪಾರವನ್ನು ಹೆಚ್ಚಿಸಿದ ಅಭಿನಂದನ್!

ನ್ಯೂಸ್ ಎಕ್ಸ್ ಪ್ರೆಸ್, ಮಾ.13: ಶತ್ರುಗಳನ್ನೂ ಕೂಡಾ ಮಿತ್ರರನ್ನಾಗಿಸುವಂತಹ ಚಹಾ ಸೇವಿಸಲು ನೀವು ಬಯಸುವಿರಾ? ಹಾಗಿದ್ದರೆ, ಕೂಡಲೇ ಪಾಕಿಸ್ತಾನದ ಕರಾಚಿಗೆ ತೆರಳ ಬೇಕಷ್ಟೆ! ಅಲ್ಲಿನ ರಸ್ತೆ ಬದಿಯ ಖಾನ್ ಎಂಬುವವರ ಚಹಾ ಅಂಗಡಿಯಲ್ಲಿ ನಮ್ಮ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಚಹಾ ಕುಡಿಯುತ್ತಿರುವುದನ್ನು ಕಾಣಬಹುದು! ಅದೂ ಬ್ಯಾನರ್ ನಲ್ಲಿ ಅವರು ಟೀ ಕುಡಿಯುತ್ತಿರುವ ಚಿತ್ರದ ಪಕ್ಕದಲ್ಲಿ ‘ಶತ್ರುಗಳನ್ನೂ ಮಿತ್ರರನ್ನಾಗಿಸುವ ಮಾರ್ಪಡಿಸುವ ಚಹಾ ಇಲ್ಲಿ ದೊರೆಯುತ್ತದೆ’. ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಅಂದಹಾಗೆ, ಈ ಚಹಾ ಅಂಗಡಿ ಮಾಲೀಕ ಸುತ್ತಮುತ್ತಲೂ ಈಗ ತುಂಬಾ ಜನಪ್ರಿಯನಾಗಿದ್ದಾನೆ ಎಂದು ಓಮರ್ ಫಾರೂಕ್ ಎಂಬುವವರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಅಂಕಲ್ ವ್ಯವಹಾರ ಕೌಶಲಗಳನ್ನು ನೋಡಿ. ಅವರ ಚಹಾ ಅಂಗಡಿ ರಸ್ತೆಯ ಪಕ್ಕದಲ್ಲಿದೆ. ಇದನ್ನು ಖಾನ್ ಟೀ ಸ್ಟಾಲ್ ಎಂದು ಹೆಸರಿಸಲಾಗಿದೆ. ಐಎಎಫ್ ಪೈಲಟ್ ಅಭಿನಂದನ್ ಅವರ ಫೋಟೋ ಹಾಕಿಕೊಂಡು ಯರ್ರಾಬಿರ್ರಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಜಾಲತಾಣಿಗರೊಬ್ಬರು ಹೇಳಿದ್ದಾರೆ.

‘ಹೀಗೂ ಉಂಟೇ?..’  ಎಂದು ಸ್ಥಳೀಯರು ಹುಬ್ಬೇರಿಸುತ್ತಿದ್ದಾರಂತೆ! ಅಂದ ಹಾಗೆ, ಇಂತಹ ಛಾಯಾಚಿತ್ರಗಳನ್ನು ಭಾರತದಲ್ಲಿ ಚುನಾವಣೆಯ ಕಾರಣಕ್ಕೆ ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ. ಆದರೆ ಪಾಕಿಸ್ತಾನದಲ್ಲಿ…? ಅದಕ್ಕೆ ಹೇಳುವುದು ನಾಗರೀಕ ಸಮಾಜದ ಜನಸಾಮಾನ್ಯರಲ್ಲಿ ಯಾವುದೇ ಜಾತಿ, ಮತ, ಗಡಿಗಳ ಬೇಲಿಯೇ ಇಲ್ಲ! ಶತ್ರುತ್ವವನ್ನು ಬೆಳೆಸುವವರು ಖಂಡಿತ ಇದನ್ನು ನೋಡಿ ತಿಳಿಯಬೇಕಷ್ಟೆ!!

ಫ್ರೆಶ್ ನ್ಯೂಸ್

Latest Posts

Featured Videos