ಮತದಾರರ ಮೋಡಿ ಮಾಡುತ್ತಿರುವ ಪದ್ಮಾವತಿ ಸುರೇಶ್

ಮತದಾರರ ಮೋಡಿ ಮಾಡುತ್ತಿರುವ ಪದ್ಮಾವತಿ ಸುರೇಶ್

 ಹೊಸಕೋಟೆ, ನ. 27: ಸಾವಿರಾರು ಕಾರ್ಯಕರ್ತರೊಂದಿಗೆ ಇಂದು ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಜಡಿಗೇನಹಳ್ಳಿ ವ್ಯಾಪ್ತಿಯ ಕಟ್ಟಿಗನಹಳ್ಳಿ, ಬೊಮ್ಮನಬಂಡೆ ಕಾಜಿ ಹೊಸಹಳ್ಳಿ, ತಿಂಡ್ಲು ಗೆದ್ದಲು ಪುರ, ಪರಮನಹಳ್ಳಿ, ಸೇರಿದಂತೆ ಹಲವು ಗ್ರಾಮಗಳಿಗೆ ಭಟಿ ನೀಡಿ ಮತಯಾಚನೆ ಮಾಡಿದರು. ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಕಟ್ಟಿಗೇನಹಳ್ಳಿಯಿಂದ ಪ್ರಚಾರ ಆರಂಭಿಸಿದರು. ಪದ್ಮಾವತಿ ಅವರಿಗೆ‌ ಪಟಾಕಿ ಸಿಡಿಸಿ ವಾದ್ಯ, ಡಾನ್ಸ್ ನೊಂದಿಗೆ ಗ್ರಾಮಸ್ತರು ಮತ್ತು ಮಹಿಳೆಯರು ಅತ್ಯಂತ ಅದರ ಮತ್ತು ಅಭೂತಪೂರ್ವವಾಗಿ ಸ್ವಗತಿಸಿದರು.

ಮಾನವೀಯತೆಯ ಪ್ರತಿ ರೂಪ ಪದ್ಮವಾತಿ: ಪ್ರಚಾರದ ಕಾರ್ಯಭಾರದ ಒತ್ತಡದ ನಡುವೆಯೂ ವಿದ್ಯಾರ್ಥಿನಿಯನ್ನು ಕುಶಲೋಪರಿ ವಿಚಾರಿಸಿದ ಅಭ್ಯರ್ಥಿ ಪದ್ಮಾವತಿ ತಿಂಡಿ ತಿನ್ನಿಸುವ ಮೂಲಕ ಮಾನವೀಯತೆ ಮೆರೆದರು ಇತರೆ ಮಹಿಳೆಯರಿಗೆ ತಮ್ಮಲ್ಲಿನ ಸಹೃದಯಿ ಹೆಣ್ಣೆಂದು ಮನವರಿಕೆ ಮಾಡಿಕೊಟ್ಟ ಘಟನೆ ನೋಡುಗರನ್ನು ನೆರೆದಿದ್ದ ಕಾರ್ಯಕರ್ತರು ಮತ್ತು ಗ್ರಾಮಸ್ತರಲ್ಲಿ ಬೆರಗುಗೊಳಿಸರು.

ಪ್ರತಿ ಗ್ರಾಮಗಳಲ್ಲೂ ಮಹಿಳೆಯರಿಂದ ಪದ್ಮಾವತಿಯವರಿಗೆ ಅದ್ಧೂರಿ ಸ್ವಾಗತ ಕೋರಿದರು. ನಿಮ್ಮ ಮನೆ ಮಗಳು ನಿಮ್ಮ ಮನೆ ಬಾಗಿಲಿಗೆ ಬಂದಿರುವೆ ನಿಮ್ಮ ಮತ ನೀಡಿ ನನಗೆ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಿ ಎಂದ ಪದ್ಮಾವತಿ ಅವರು ನಮ್ಮ ಮತದಾರರು ಯಾವುದೇ ಕಾರಣಕ್ಕೂ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಗೆ ಮತ ನೀಡಿ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದರಲ್ಲದೆ, ನುಡಿದಂತೆ ನಡೆದ ಸಿದ್ದರಾಮಯ್ಯ ನೀಡಿರುವ ಜನಪರ ಯೋಜನೆಗಳಾದ ಅನ್ನ ಭಾಗ್ಯ, ಶಾದಿಬಾಗ್ಯ, ಬಿಸಿಯೂಟ, ಶೂಭಾಗ್ಯ, ಯಾರೂ ಮರೆಯುವಂತಿಲ್ಲವೆಂದು ಹೇಳಿ ಮತದಾರ ಮನವೊಲಿಕೆಯಲ್ಲಿ ತಮ್ಮದೇ ಶೈಲಿಯಲ್ಲಿ ಮತಯಾಚನೆ ಮಾಡಿದರು. ಅವರ ಅಭಿವೃದ್ಧಿ ಕಾಳಜಿಗೆ ನಿಮ್ಮೆಲರ ಮತ ಕಾಂಗ್ರಸ್ ಪಕ್ಷಕ್ಕೆ ಅತ್ಯವಶ್ಯಕ ಎಂದರು.

ಮಾಲೂರು ಶಾಸಕ ನಂಜೇಗೌಡ ಪದ್ಮಾವತಿ ಸುರೇಶ್ ಅವರೊಂದಿಗೆ ಮತಯಾಚನೆ ಮಾಡಿದರು.

ಪಕ್ಷಕ್ಕೆ ಮತ್ತು ಮತದಾರರಿಗೆ ಮೋಸ ಮಾಡಿ ಒಂದು ವರೆ ವರ್ಷದಲ್ಲೇ ಪಕ್ಷಾಂತರ ಮಾಡಿದ ಎಂಟಿಬಿಗೆ ತಕ್ಕ ಪಾಠ ಕಲಿಸುವಂತೆ  ಮಾಲೂರು ಶಾಸಕ ನಂಜೇಗೌಡ ಮನವಿ ಮಾಡಿದರು.

ಮೈತ್ರಿ ಸರ್ಕಾರದಲ್ಲಿ ಮಂತ್ರಿ ಪದವಿ ನೀಡತ್ತು. ಪಕ್ಷಾಂತರ ಮಾಡಿ ಮತ್ತೆ ಚುನಾವಣೆಗೆ ಬಂದಿದ್ದಾರೆ. ಅಲ್ಪ ಸಂಖ್ಯಾತರು ನಮ್ಮ ಪಕ್ಷದ ಕಚೇರಿಯಲ್ಲಿ ಹತ್ತು ವರ್ಷ ಕಸ ಹೊಡಿ ಎನ್ನುವ ಪಕ್ಷಕ್ಕೆ ಪಕ್ಷಾಂತಾರ ಮಾಡಿದ ಎಂಟಿಬಿ ಸೋಲಿನ ರುಚಿ ತೋರಿಸಿ ಎಂದು ನಂಜೇಗೌಡ ಕರೆ ನೀಡಿದರು.

ನಮ್ಮ ಸರ್ಕಾರ ಟಿಪ್ಪು ಜಯಂತಿ ನೀಡಿತ್ತು ಟಿಪ್ಪು‌ಜಯಂತಿ ತೆಗೆದ ಬಿಜೆಪಿ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಸಗೀರ್ ಅಹ್ಮದ್, ಕೆಪಿಸಿಸಿ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಪ್ರಭಾಕರ್, ಪರಮನಹಳ್ಳಿ ರಾಮಂಜಿನಪ್ಪ, ಗ್ರಾಪಂ ಸದಸ್ಯಸಿದ್ದೇಶಪ್ಪ, ಕೃಷ್ಣಪ್ಪ, ರವಿ, ಸುಬ್ಬು ಸೇರಿದಂತೆ ನೂರಾರು ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಮನೆ  ಮನೆ ಮತಯಾಚನೆ

ಕಟ್ಟಿಗೇನಹಳ್ಳಿ ತಿಂಡ್ಲು, ಪರಮನಹಳ್ಳಿ, ಗೆದ್ದಲು, ಪುರ, ಬೊಮ್ಮನ ಬಂಡೆ ಸೇರಿದಂತೆ ಇತರ ಗ್ರಾಮಗಳಲ್ಲಿ ಸಾವಿರಾರು ಕಾಂಗ್ರೆಸ್ ಮುಖಂಡರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕರಪತ್ರಗಳೊಂದಿಗೆ  ಮತಯಾಚನೆಯಲ್ಲಿ ಪಾಲ್ಗೊಂಡು ಮನೆ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರಿಗೆ ಮತ ನೀಡಿ ಪಕ್ಷಾಂತರಿಗಳಿಗೆ ಮತ ನೀಡ ಬೇಡಿ ನಿಮ್ಮ ಮತವನ್ನು ಈಗಾಗಲೇ ಮಾರಿ ಕೊಂಡವರಿಗೆ ಬುದ್ದಿ ಕಲಿಸಿ ಎಂದು ಪ್ರಚಾರದ ವೇಳೆ ಕಾರ್ಯಕರ್ತರು ಮತದಾರರಿಗೆ ಹೇಳುವ ಮೂಲಕ  ಮನವೊಲಿಕೆಯಲ್ಲಿ ತೊಡಗಿದ್ದ ಪ್ರಸಂಗ ವಿಶೇಷವಾಗಿ ಕಂಡು ಬಂತು.

ಪ್ರತಿ ಮಹಿಳೆಯರು ಮತದಾರರ  ಮನವೊಲಿಕೆಯಲ್ಲಿ ತೊಡಗಿದ್ದರು. ಕಾರ್ಯಕರ್ತರು ಮುಖಂಡರು ಮನೆ ಮನೆ ಪ್ರಚಾರ ಮಾಡುತ್ತಿದ್ದುದನ್ನು ಗಮನಿಸಿದ ಪದ್ಮಾವತಿ ಬೊಮ್ಮನ ಬಂಡೆ ಗ್ರಾಮದಲ್ಲಿ ತೆರೆದ ವಾಹನದಿಂದ ಕೆಳಗಿಳಿದು ಬಂದು ಮತದಾರರಿಗೆ ಕರ ಪತ್ರ ನೀಡುವ ಮೂಲಕ ಪದ್ಮಾವತಿಯವರೂ ಮತ ಹಾಕುವವಂತೆ ಪ್ರಾಚಾರದಲ್ಲಿ ತೊಡಗಿದರು.

ಫ್ರೆಶ್ ನ್ಯೂಸ್

Latest Posts

Featured Videos