ದಸರಾ ಉತ್ಸವದ 5ನೇ ಆವೃತ್ತಿಗೆ ಆತಿಥ್ಯ ವಹಿಸಲು ಸಜ್ಜು

ದಸರಾ ಉತ್ಸವದ 5ನೇ ಆವೃತ್ತಿಗೆ ಆತಿಥ್ಯ ವಹಿಸಲು ಸಜ್ಜು

ದೇವನಹಳ್ಳಿ, ಅ. 1: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಕರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್)ಅಕ್ಟೋಬರ್ 1.ರಿಂದ 3, 2019 ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 8.30 ರವರೆಗೆ ದಸರಾ ಉತ್ಸವದ 5ನೇ ಆವೃತ್ತಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ.

3 ದಿನಗಳ ಈ ಸಂಭ್ರಮ ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯಲಿದ್ದು, ಪ್ರಯಾಣಿಕರು ಮತ್ತು ಸಂದರ್ಶಕರಿಗೆ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದೆ. ಕರ್ನಾಟಕದ ಎಲ್ಲೆಡೆಯ ಖ್ಯಾತ ಕಲಾವಿದರು ತಮ್ಮ ಸಂಗೀತ, ನೃತ್ಯ, ವಾದ್ಯ ಸಂಗೀತ ಮತ್ತು ಯುದ್ಧ ಕಲೆಗಳ ಪ್ರದರ್ಶನದಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಬೊಂಬೆ ಹಬ್ಬಎನ್ನಲಾಗುವ ಸಾಂಪ್ರದಾಯಿಕ ಜಾನಪದ ಶೈಲಿಯ ಬೊಂಬೆಗಳ ಪ್ರದರ್ಶನವನ್ನು ವಿಮಾನ ನಿಲ್ದಾಣದ ರಸ್ತೆಗಳ ಪಕ್ಕದ ಕಲ್ಲುಹಾಸಿನ ಮೇಲೆ ಆಯೋಜಿಸಲಾಗುತ್ತಿದೆ. ದಸರಾ ಉತ್ಸವದ ಭಾಗವಾಗಿರುವ ಆನೆಗಳ ರೀತಿಯಲ್ಲಿ ಬೃಹತ್ ಆನೆಯ ಬೊಂಬೆಯನ್ನು ಕೂಡ ಪ್ರದರ್ಶಿಸಲಾಗುತ್ತಿದೆ.

ದಸರಾ ತಿರುಳಿನ ವರ್ಚುವಲ್ ರಿಯಾಲಿಟಿ ಗೇಮ್ ಅನ್ನು ಕೂಡ ಗ್ರಾಹಕರು ಅನುಭವಿಸಬಹುದಾಗಿದೆ. ಈ ಹೊಳಪಿಗೆ ಮತ್ತೊಂದು ಸೇರ್ಪಡೆಯಾಗಿ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಹೊಳಪಿನ ಬೆಳಕಿನೊಂದಿಗೆ ಅಲಂಕರಿಸಲಾಗುವುದು.

ಸಂಭ್ರಮಾಚರಣೆಯ ಭಾಗವಾಗಿ ಬಿಐಎಎಲ್ ಅರದೇಶನಹಳ್ಳಿಯಲ್ಲಿ ತಾನು ದತ್ತು ಪಡೆದಿರುವ ಶಾಲೆಯಲ್ಲಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಸಂಭ್ರಮದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಗ್ರಾಮೋತ್ಸವವನ್ನು ಕೂಡ ಆಯೋಜಿಸುತ್ತಿದೆ. ಡೊಳ್ಳುಕುಣಿತ, ಸೂತ್ರದ ಬೊಂಬೆಯಾಟ ಪ್ರದರ್ಶನ ಮತ್ತು ಗಾರುಡಿ ಗೊಂಬೆ ನೃತ್ಯಗಾರರಿಂದ ಮನರಂಜನಾ ಕರ್ಯಕ್ರಮಗಳು ಕೂಡ ನಡೆಯಲಿವೆ.

 

ಫ್ರೆಶ್ ನ್ಯೂಸ್

Latest Posts

Featured Videos