ಸಲ್ಮಾನ್ ಖಾನ್ ಬಿಗ್ ಬಾಸ್ ಶೋನಿಂದ ಹೊರಗೆ!  

ಸಲ್ಮಾನ್ ಖಾನ್ ಬಿಗ್ ಬಾಸ್ ಶೋನಿಂದ ಹೊರಗೆ!  

ಮುಂಬೈ, ಡಿ. 12: ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಹೊರಬಂದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಶೋನಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸಲ್ಮಾನ್ ಖಾನ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು, ಬಿಗ್ ಬಾಸ್ ಶೋನಿಂದ ವಿಶ್ರಾಂತಿ ಪಡೆದುಕೊಳ್ಳಿ ಎಂದು ವೈದ್ಯರು ಸೂಚಿಸಿದ್ದಾರಂತೆ. ಹೀಗಾಗಿ, ಸಲ್ಲು ಭಾಯ್ ಶೋ ನಿರೂಪಣೆ ಮಾಡದಿರಲು ನಿರ್ಧರಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಬಿಗ್ ಬಾಸ್ ನಿಂದ ದೂರ ಉಳಿಯಬೇಕು ಎಂದು ಸಲ್ಮಾನ್ ಖಾನ್ ಚಿಂತಿಸುತ್ತಲೇ ಇದ್ದಾರಂತೆ. ಆದರೆ, ಬಿಗ್ ಬಾಸ್ ನವರ ಒತ್ತಾಯಕ್ಕೆ ಮಣಿದು ಸಲ್ಲು ಈ ಶೋ ನಡೆಸಿಕೊಡುತ್ತಿದ್ದರು. ವಿವಾದಾತ್ಮಕ ಹಿಂದಿ ಬಿಗ್ ಬಾಸ್ 13ನೇ ಸೀಸಸನ್ ಅನ್ನು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. 4ನೇ ಸೀಸನ್ನಿಂದ ಹಿಂದಿ ಬಿಗ್ ಬಾಸ್ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಸಲ್ಲುಗಿದೆ.

ಆದರೆ, ಅವರು ಈಗ ಏಕಾಏಕಿ ಬಿಗ್ ಬಾಸ್ ಶೋನಿಂದ ಹೊರ ನಡೆದಿದ್ದಾರೆ.! ಸಲ್ಮಾನ್ ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆದಿದ್ದರು. ಅವರಿಗೆ ಕಾಣಿಸಿಕೊಂಡಿರುವ ಕಾಯಿಲೆಯಿಂದ ಸಿಟ್ಟು ಮಾಡಿಕೊಂಡರೆ ನರಗಳ ಮೇಲೆ ನೇರ ಪ್ರಭಾವ ಉಂಟಾಗಲಿದೆಯಂತೆ. ಹೀಗಾಗಿ, ಸಲ್ಲುಗೆ ರೆಸ್ಟ್ ಮಾಡುವಂತೆ ಅವರ ಕುಟುಂಬದವರು ಸೂಚಿಸಿದ್ದಾರಂತೆ. ಕಳೆದ ಕೆಲ ವರ್ಷಗಳಿಂದ ಬಿಗ್ ಬಾಸ್ ನಿಂದ ದೂರ ಉಳಿಯಬೇಕು ಎಂದು ಸಲ್ಮಾನ್ ಖಾನ್ ಚಿಂತಿಸುತ್ತಲೇ ಇದ್ದಾರೆ ಎನ್ನಲಾಗಿದೆ. ಆದರೆ, ಬಿಗ್ ಬಾಸ್ ನವರ ಒತ್ತಾಯಕ್ಕೆ ಮಣಿದು ಸಲ್ಲು ಈ ಶೋ ನಡೆಸಿಕೊಡುತ್ತಿದ್ದರು. ಈಗ ಕುಟುಂಬ ಕಡೆಯುವರಿಂದ ಒತ್ತಡ ಹೆಚ್ಚಿದ್ದು, ಹೀಗಾಗಿ ಅವರು ಬಿಗ್ ಬಾಸ್ ಶೋನಿಂದ ಹೊರ ನಡೆದಿದ್ದಾರಂತೆ. ಡಿಸೆಂಬರ್ 27ರಂದು ಸಲ್ಲು ಜನ್ಮದಿನ. ಹುಟ್ಟುಹಬ್ಬವನ್ನು ಬಿಗ್ ಬಾಸ್ ಮನೆಯಲ್ಲಿ ಆಚರಿಸಿ ನಂತರ ಅವರು ಶೋನಿಂದ ಹೊರ ನಡೆಯಲ್ಲಿದ್ದಾರೆ. ಇನ್ನು, ಮುಂದಿನ ಶೋಗಳನ್ನು ಫರಾ ಖಾನ್ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ಗಾಗಿ ಈ ಶೋ ನೋಡುವವರ ಸಂಖ್ಯೆ ಹೆಚ್ಚಿತ್ತು.

ಫ್ರೆಶ್ ನ್ಯೂಸ್

Latest Posts

Featured Videos