ರೈತರಿಗೆ ಮಾರಕ ಕಾನೂನಿಗೆ ವಿರೋಧ

  • In State
  • August 11, 2020
  • 160 Views
ರೈತರಿಗೆ ಮಾರಕ ಕಾನೂನಿಗೆ ವಿರೋಧ

ಗೌರಿಬಿದನೂರು:ಕೇಂದ್ರ ರಾಜ್ಯ ಸರ್ಕಾರಗಳು ರೈತರಿಗೆ ಮಾರಕವಾಗುವ ಕಾನೂನುಗಳನ್ನು ಮಾಡುತ್ತಿವೆ. ಆದ್ದರಿಂದ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ್ ಬಣ)ದ ಅಧ್ಯಕ್ಷ ಮಾಳಪ್ಪ ತಿಳಿಸಿದರು.

ನಗರದ ಹೊರ ವಲಯದಲ್ಲಿರುವ ಮಿನಿವಿಧಾನಸೌಧದ ಬಳಿ ರೈತ ಸಂಘ(ಕೋಡೀಹಳ್ಳಿ ಚಂದ್ರಸೇಖರ್ ಬಣ)ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆಯಿಂದ ಸಣ್ಣ, ಅತಿಸಣ್ಣ ರೈತರ ಜಮೀನುಗಳು ಬಂಡವಾಳ ಶಾಹಿಗಳ ಪಾಲಾಗುತ್ತದೆ. ಹಾಲಿನ ದರ ಕಡಿಮೆ ಮಾಡಿದ್ದರಿಂದ ಹೈನುಗಾರಿಕೆ ರೈತರಿಗೆ ಕಷ್ಟವಾಗಿದೆ. ಎಪಿಎಂಸಿ ಕಾಯಿದೆ ತಿದ್ದುಪಡಿ, ವಿದ್ಯುತ್ ಕಾಯಿದೆ, ಬೀಜ ಮಸೂದೆ ಕಾಯಿದೆ, ಅಗತ್ಯ ವಸ್ತುಗಳ ಕಾಯಿದೆ ತಿದ್ದುಪಡಿಗಳಿಂದ ರಾಜ್ಯ ರೈತರಿಗೆ ಅನ್ಯಾಯವಾಗುತ್ತಿದೆ. ಕೊರೋನಾ ಸೊಂಕಿನಿAದ ಬಳಲುತಿದ್ದ ರೈತರಿಗೆ ಇದು ಶಾಪವಾಗುತ್ತದೆ. ಆದ್ದರಿಂದ ಈ ಕಾಯಿದೆಗಳನ್ನು ವಾಪಸ್ಸು ಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರವನ್ನು ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ನೀಡಿದರು.

ಧರಣಿಯಲ್ಲಿ ಕಾರ್ಯದರ್ಶಿ ಗಂಗಾಧರಪ್ಪ, ಮಂಜುನಾಥ, ನಾರಾಯಣ ಸ್ವಾಮಿ, ನವೀನ್ ಕುಮಾರ್, ಅಪ್ಸರ್ ಬಾಷ, ಚಂದ್ರಬಾಬು, ನಿಸಾರ್ ಅಹಮ್ಮದ್ ಮುಂತಾದವರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos