ಮಹಾರಾಷ್ಟ್ರದ ಪಲ್ಗಾರ್ನಲ್ಲಿ ಕಾರ್ಖಾನೆ ಸ್ಪೋಟ

ಮಹಾರಾಷ್ಟ್ರದ ಪಲ್ಗಾರ್ನಲ್ಲಿ ಕಾರ್ಖಾನೆ ಸ್ಪೋಟ

ಪಲ್ಗಾರ್ (ಮಹಾರಾಷ್ಟ್ರ), ಜ. 12 : ರಾಸಾಯನಿಕ ಕಾರ್ಖಾನೆ ಸ್ಪೋಟಗೊಂಡ ಪರಿಣಾಮ ಎಂಟು ಮಂದಿ ಪ್ರಾಣ ಕಳೆದುಕೊಂಡು, ಹಲವು ಮಂದಿ ಗಾಯಗೊಂಡ ಘಟನೆ ಮುಂಬೈನಿಂದ 100 ಕಿ.ಮೀ. ದೂರದಲ್ಲಿರುವ ಪಲ್ಗಾರ್ ಜಿಲ್ಲೆಯ ಬೋಯ್ಸಾರ್ನಲ್ಲಿ ಶನಿವಾರ ಸಂಜೆ ನಡೆದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕೊಲ್ವಾಡೆ ಗ್ರಾಮದಲ್ಲಿರುವ ರಾಸಾಯನಿಕ ಕಾರ್ಖಾನೆ ಸಂಜೆ 7.20ರ ಸಮಯದಲ್ಲಿ ಸ್ಫೋಟಗೊಂಡಿದೆ. ಸ್ಫೋಟದ ಶಬ್ಧ ಸುಮಾರು 15 ಕಿ.ಮೀ. ದೂರದವರೆಗೂ ಕೇಳಿಸಿದೆ ಎಂದು ಪೊಲೀಸ್ ವಕ್ತಾರ ಹೇಮಂತ್ ಕಟ್ಕರ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos