ಟ್ಯಾಂಕರ್ ಸ್ಫೋಟ: ಇಬ್ಬರ ಸಾವು

ಟ್ಯಾಂಕರ್ ಸ್ಫೋಟ: ಇಬ್ಬರ ಸಾವು

ವಿಜಯಪುರ, ಡಿ. 21 : ವೆಲ್ಡಿಂಗ್ ಮಾಡುವಾಗ ಎಥೆನಾಲ್ ಟ್ಯಾಂಕರ್ ಸ್ಫೋಟಗೊಂಡ ಹಿನ್ನೆಲೆ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ನಾಡಗೌಡ ರೋಡ್ಲೈನ್ಸ್ನಲ್ಲಿ ನಡೆದಿದೆ.
ವೇಲ್ಡಿಂಗ್ ಮಾಡುವಾಗ ಟ್ಯಾಂಕರ್ ಸ್ಫೋಟಗೊಂಡಿದ್ದರಿಂದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರೋಡ್ಲೈನ್ಸ್ ಗ್ಯಾರೇಜ್ನಲ್ಲಿ ಕೆಲಸ ಮಾಡುವ ರಾಜು ಹಾಗೂ ಪ್ರಕಾಶ ಟೋನಿ ಮೃತಪಟ್ಟ ಕಾರ್ಮಿಕರು.

ಎಥಿನಾಲ್ ಖಾಲಿ ಮಾಡಿದ ಬಳಿಕ ಟ್ಯಾಕರ್ನ್ನು ಗ್ಯಾರೇಜ್ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಅದೇ ವೇಳೆ ಟ್ಯಾಂಕರ್ ಸ್ಫೋಟಗೊಂಡಿದ್ದರಿಂದ, ಸ್ಫೋಟದ ತೀವ್ರತೆಗೆ ಇಬ್ಬರೂ ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos