ನೀರು ಹಂಚಿಕೆ ಆದೇಶ ನೀಡಿಲ್ಲ

ನೀರು ಹಂಚಿಕೆ ಆದೇಶ ನೀಡಿಲ್ಲ

ಶಿರಾ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಸರ್ಕಾರದ ನೀರಾವರಿ ಇಲಾಖೆ ಮತ್ತು ಹೇಮಾವತಿ ನೀರು ಹಂಚಿಕೆ ಸಲಹಾ ಸಮಿತಿಗೆ ಯಾವುದೇ ಆದೇಶವಿಲ್ಲವೆಂದು ಸರ್ಕಾರದ ಸಣ್ಣ ನೀರಾವರಿ ಮುಖ್ಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಹೇಳಿದರು.
ಅವರು ಮುಖ್ಯಮಂತ್ರಿ ಯಡಿಯೂರಪ್ಪರವರ ಆದೇಶದಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಚಾನಲ್ ವೀಕ್ಷಸಿಸಿ ಅವರು ಸಂಸದರಾದ ನಾರಾಯಣಸ್ವಾಮಿ ರವರಿಗೆ ವಿವರಿಸಿದರು,
ಸಂಸದ ನಾರಾಯಣ ಸ್ವಾಮಿ ಮಾತನಾಡಿ ಮದಲೂರು ಕೆರೆಗೆ ನೀರು ಬಿಡುವ ವಿಚಾರವಾಗಿ ಚುನಾವಣಾ ಪೂರ್ವದಲ್ಲಿ ಮತದರಾರಿಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಮದಲೂರು ಕೆರೆಗೆ ನೀರು ಬಿಡಲು ಸರ್ಕಾರದಿಂದ ಅಧಿಸೂಚನೆ ಆಗಬೇಕು ಇದುವರೆವಿಗೂ ಅಧಿಸೂಚನೆ ಆಗಿಲ್ಲ.
ಬಾಯಿ ಮಾತಿನಲ್ಲಿ ಹೆಚ್ಚುವರಿ ನೀರು ಹರಿಸುತ್ತೇವೆ ಎಂದು ಹೇಳುತ್ತಿದ್ದರೆ. ಆದರೆ, ಖಾಯಂ ಆಗಿ ಆಧಿಸೂಚನೆ ಆಗಬೇಕು ಅದಕ್ಕೆ ನೀವುಗಳು ಪರೀಶಿಲನೆ ಮಾಡಿ ತಾಂತ್ರಿಕ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅಧಿಕೃತ ಆದೇಶವನ್ನು ಮಾಡುಲು ಅನುವು ಮಾಡಿಕೊಡಬೇಕು, ನಾನು ಹಾಗೂ ಸ್ಥಳಿಯ ಮುಖಂಡರು ಈ ವಿಚಾರವಾಗಿ ಮುಖ್ಯಮಂತ್ರಿಗಳಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ ಇನ್ನೂ ಆರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುತ್ತೇವೆ ಎಂದು ಹೇಳಿದರು.
ಬಿ.ಜೆ.ಪಿ ಅಭ್ಯರ್ಥಿಯಾದ ಡಾ.ರಾಜೇಶ್ ಗೌಡ, ಎಸ್.ಆರ್.ಗೌಡ, ಬಿ.ಕೆ.ಮಂಜಣ್ಣ, ಸುಧಾಕರ್ ಗೌಡ, ನರಸಿಂಹಮೂರ್ತಿ ಮದಲೂರು ಮೇಸ್ಟುç, ಶ್ರೀರಂಗಯಾದವ್, ಮಾಜಿ ನಗರಸಭೆ ಸದಸ್ಯ ನಟರಾಜ, ಹುಳಿಗೆರೆ ನರಸಿಂಹರಾಜು, ವಕೀಲ ಹುಳಿಗೆರೆ ರಾಜು, ಬನ್ನಿನಗರ ಸತೀಶ್ , ಸಂತೇಪೇಟೆ ರಮೇಶ್ ಹಾಗೂ ಅನೇಕ ರೈತ ಮುಖಂಡರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos