ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ಗೋಪುರ ಕಳಸ ಸ್ಥಾಪನೆ

ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ಗೋಪುರ ಕಳಸ ಸ್ಥಾಪನೆ

ತುರುವೇಕೆರೆ, ಫೆ. 10: ಪಟ್ಟಣದಿಂದ ಕೂಗಳತೆಯ ದೂರದಲ್ಲಿರುವ ಹಾವಾಳ ಗ್ರಾಮದ ಶ್ರೀ ಗೊಂದಿ ವೀರಾಂಜನೇಯ ಸ್ವಾಮಿಯವರ ದೇವಾಲಯ ಪ್ರವೇಶೋತ್ಸವ ಕಳಸ ಸ್ಥಾಪನೆ ನೆರವೇರಿಸಲಾಯಿತು.

ಗೊಂದಿ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲಸಿ ಎಲ್ಲಾ ಭಕ್ತರುಗಳು ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಶ್ರೀ ಗೊಂದಿ ವೀರಾಂಜನೇಯ ಸ್ವಾಮಿಯವರ ನೂತನ ದೇವಾಲಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಪ್ರೋತ್ಸಾಹದೊಂದಿಗೆ ಹಾಗೂ ಭಕ್ತಾದಿಗಳು ಮತ್ತು ಗ್ರಾಮಸ್ಥರು ಗಳ ಸಹಕಾರದೊಂದಿಗೆ ಪುನರ್ ನಿರ್ಮಾಣ ಮಾಡಲಾಗಿದೆ

ಶಾಸಕರಾದ ಮಸಾಲೆ ಜಯರಾಮ್ ರವರು ಮಾತನಾಡಿ, ನಾನು 4 ವರ್ಷದಿಂದ ಶ್ರೀ ವೀರಾಂಜನೇಯ ಸನ್ನಿಧಿಗೆ ಬರುತ್ತಿದ್ದು, ದೇವಸ್ಥಾನವು ಹಾವಳ ಗ್ರಾಮದಿಂದ ದೂರವಿದ್ದರೂ ಸಹ ಅಪಾರ ಭಕ್ತಾದಿಗಳನ್ನು ಹೊಂದಿದೆ. ನೆನ್ನೆ ಹುಣ್ಣಿಮೆ ಆದ್ದರಿಂದ ತಾಲೂಕಿನ ಸುಮಾರು ದೇವಾಲಯಗಳಲ್ಲಿ ಸತ್ಯನಾರಾಯಣ ಪೂಜೆ ಗೋಪುರ ಕಳಸ ಸ್ಥಾಪನೆ ಹೋಮ-ಹವನ ನಡೆಯುತ್ತಿದೆ. ಮತ್ತು ಹಾವಾಳದ ಗ್ರಾಮದೇವತೆ ಕೊಲ್ಲಾಪುರದಮ್ಮ ಹಾಗೂ ಶ್ರೀ ವೀರಾಂಜನೇಯ ದೇವರುಗಳಿಗೆ ನನ್ನ ಅನುದಾನದಿಂದ 10 ಲಕ್ಷ ರೂಗಳನ್ನು ನೀಡುತ್ತಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುಮಾರು ಒಂಬತ್ತು ಊರಿನ ಗ್ರಾಮದೇವತೆಗಳು ಆಗಮಿಸಿದ್ದವು ಮತ್ತು ಸಾರ್ವಜನಿಕರಿಂದ ಸಾರ್ವಜನಿಕರಿಗಾಗಿ ಅನ್ನದಾನ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರಸನ್ನನಾಥ ಸ್ವಾಮೀಜಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಸಕರಾದ ಮಸಾಲೆ ಜಯರಾಮ್. ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪನವರು, ವಿಧಾನಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು,  ಹಾಲು ಒಕ್ಕೂಟದ ಅಧ್ಯಕ್ಷರಾದ ಸಿ. ವಿ ಮಹಾಲಿಂಗಯ್ಯ,  ದೊಡ್ಡಾಗಟ್ಟ ಚಂದ್ರೇಶ್ ಸಮಾಜಸೇವಕರು, ಹಾಗೂ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸೇವಾ ಟ್ರಸ್ಟ್ ಸರ್ವ ಸದಸ್ಯರುಗಳು, ಹಾವಾಳ ಗ್ರಾಮಸ್ಥರು,  ಕೊಡಗಿಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಈ ಸಂದರ್ಭದಲ್ಲಿ ಶ್ರೀ ವೀರಾಂಜನೇಯ ಸ್ವಾಮಿಯವರ ದರ್ಶನ ಪಡೆದು ಪುನೀತರಾದರು.

ಫ್ರೆಶ್ ನ್ಯೂಸ್

Latest Posts

Featured Videos