ಹೊಸ ಕಾರಿಗೆ ‘ಸಗಣಿ’ ಬಳಿದ ಮಾಲೀಕ!

ಹೊಸ ಕಾರಿಗೆ ‘ಸಗಣಿ’ ಬಳಿದ ಮಾಲೀಕ!

ಅಹಮದಾಬಾದ್, ಮೇ 22,ನ್ಯೂಸ್ ಎಕ್ಸ್ ಪ್ರೆಸ್ : ಕಾರು ಖರೀದಿಸಿದ ಬಳಿಕ ಮಾಡಿಫೈ ಮಾಡೋದು ಸಹಜ. ಆದರೆ ಇದು ಮಾಡಿಫೈ ಮಾಡಿದ ಕಾರಲ್ಲ. ಮಾಲೀಕನ ಹೊಸ ಐಡಿಯಾ ಇದೀಗ ವಿಶ್ವದಲ್ಲೇ ಭಾರಿ ಚರ್ಚೆಯಾಗುತ್ತಿದೆ. ಬಿರು ಬಿಸಿಲಿನಿಂದ ಪಾರಾಗಲು  ಅಹಮ್ಮದಾಬಾದ್ ನಲ್ಲಿ ಕಾರು ಮಾಲೀಕರೊಬ್ಬರು ತನ್ನ ಕಾರಿಗೆ ಸೆಗಣಿ ಸಾರುವ ಮೂಲಕ ಕೂಲ್ ಕೂಲ್  ಆಗಲು ರೂಪೇಶ್ ಗೌರಂಗಾ ದಾಸ್ ಎಂಬವರು ಹೊಸ ಐಡಿಯಾ ಹುಡುಕಿದ್ದಾರೆ.

  ಸಗಣಿ ಮೆತ್ತಲು ಮುಖ್ಯ ಕಾರಣ :  ಅಷ್ಟಕ್ಕೂ ಸೆಗಣಿ ಮೆತ್ತಲು ಮುಖ್ಯ ಕಾರಣವಿದೆ. ಅಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಹೀಗಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಾಲೀಕ ಸೆಗಣಿಯನ್ನು ತನ್ನ ಕಾರಿಗೆ ಸಾರಿದ್ದಾರೆ.  ದೇಶದ ಬಹುತೇಕ  ಭಾಗ ಉರಿಬಿಸಿನಿಂದ ಸುಡುತ್ತಿದೆ. ಗ್ರಾಮೀಣ ಭಾರತದಲ್ಲಿ ಮನೆಯಂಗಳಕ್ಕೆ ಈಗಲೂ ಸಗಣಿ ಸಾರುತ್ತಿದ್ದಾರೆ. ಈ ಮೂಲಕ ಮನೆ ಹಾಗೂ ಸುತ್ತಲು ತ್ತಲು ಸ್ವಚ್ಛಗೊಳಿಸುವ ಪರಿಪಾಠವಿದೆ. ಇದರಿಂದ ಮನೆ ತಂಪಾಗಿರುತ್ತದೆ ಎಂಬುದನ್ನು ಗ್ರಾಮೀಣ ಜನರು ಅನುಭವದಿಂದ ಕಂಡುಕೊಂಡಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕಾರು ಮಾಲೀಕ ತಮ್ಮ ಕಾರಿಗೂ ಸಗಣಿ ಮೆತ್ತಿಸಿಕೊಂಡಿದ್ದಾರೆ. ತಮ್ಮ ಫೇಸ್‍ಬುಕ್ ನಲ್ಲಿ ಫೋಟೋ ಹಾಕಿ, ಇದೊಂದು ಒಳ್ಳೆಯ ಉಪಾಯವಾದೆ. ಎಲ್ಲೂ ಕಂಡಿಲ್ಲ, ಕಾಣಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos