ನೆಟ್‌ ಫ್ಲಿಕ್ಸ್ ನ ಈ ಶೋ ನೋಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ನೆಟ್‌ ಫ್ಲಿಕ್ಸ್ ನ ಈ ಶೋ ನೋಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ವಾಷಿಂಗ್ಟನ್, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಅಮೆರಿಕಾದ ನೆಟ್‌ ಫ್ಲಿಕ್ಸ್ ವಿವಾದಾತ್ಮಕ ಶೋ 13 reasons why ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. 12 ವರ್ಷದ ಹುಡುಗಿ ಈ ಶೋ ವೀಕ್ಷಣೆ ಮಾಡಿದ ನಂತ್ರ ತನ್ನ ಮನೆಯ ಬಾತ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಅಮೆರಿಕಾದಲ್ಲಿ ನಡೆದಿದೆ. 12 ವರ್ಷದ ಬಾಲಕಿ ಆತ್ಮಹತ್ಯೆಗೂ ಮುನ್ನ ಸಾವಿಗೆ 6 ಕಾರಣಗಳನ್ನು ಹೇಳಿದ್ದಾಳೆ. 13 reasons why ಶೋನಲ್ಲಿ ತೋರಿಸುವ ಕಾರಣವನ್ನೇ ಬಾಲಕಿ ಬರೆದಿದ್ದಾಳೆ. 13 reasons why ಶೋನಲ್ಲಿ ಖಿನ್ನತೆಯಿಂದ ಬಳಲುವ ಯುವಜನತೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದನ್ನು ತೋರಿಸಲಾಗುತ್ತದೆ. ಅನೇಕ ದಿನಗಳಿಂದ ಬಾಲಕಿ ಈ ಶೋ ವೀಕ್ಷಣೆ ಮಾಡ್ತಿದ್ದಳು ಎನ್ನಲಾಗಿದೆ. ಅಲ್ಲಿಂದ ಆಕೆ ವರ್ತನೆ ಬದಲಾಗಿತ್ತಂತೆ. ಆಕೆ ಕೋಣೆಯಲ್ಲಿ ಹುಡುಗಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಕೆಚ್ ಸಿಕ್ಕಿದೆ. ಶಾಲೆಯಲ್ಲಿ ಸ್ನೇಹಿತರಿಂದ ಬೇಸರಗೊಂಡಿದ್ದ ಬಾಲಕಿ ಈ ಶೋ ವೀಕ್ಷಣೆ ನಂತ್ರ ಆತ್ಮಹತ್ಯೆ ಬಗ್ಗೆ ಆಲೋಚನೆ ಮಾಡಿದ್ದಾಳೆ. ಈ ಹಿಂದೆಯೂ ಈ ಶೋ ವಿವಾದಕ್ಕೆ ಕಾರಣವಾಗಿತ್ತು. ಇದ್ರಲ್ಲಿ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವುದನ್ನು ತೋರಿಸಲಾಗಿತ್ತು. ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.

ಫ್ರೆಶ್ ನ್ಯೂಸ್

Latest Posts

Featured Videos