ಕೆಲಸ ಸಿಗಲಿಲ್ಲವೆಂದು ನೇಣಿಗೆ ಶರಣಾದ ಯುವಕ

ಕೆಲಸ ಸಿಗಲಿಲ್ಲವೆಂದು ನೇಣಿಗೆ ಶರಣಾದ ಯುವಕ

ಚಿಕ್ಕಮಗಳೂರು: ನಿರುದ್ಯೋಗಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ರಾಜೀವ್ ಬಡಾವಣೆಯಲ್ಲಿ ನಡೆದಿದೆ.

ಎನ್.ಆರ್​. ಪುರದ ಮುಗೀಲ್ ಕುಮಾರ್ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿಯೇ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಯುವಕ. ಮೊದಲು ಇಲಿ ಪಾಶಾಣ, ತಂದೆಯ ಬಿಪಿ ಮಾತ್ರೆಗಳು ಮತ್ತು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಬಳಿಕ ಮನೆಯಲ್ಲಿಯೇ ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಘಟನಾ ಸ್ಥಳಕ್ಕೆ ಎನ್.ಆರ್. ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos