50 ಸೆಕೆಂಡಿನ ಜಾಹಿರಾತಿನಲ್ಲಿ ನಟಿಸಲು ನಯನತಾರಾ ಸಂಭಾವನೆ ಎಷ್ಟು ಗೊತ್ತಾ?

50 ಸೆಕೆಂಡಿನ ಜಾಹಿರಾತಿನಲ್ಲಿ ನಟಿಸಲು ನಯನತಾರಾ ಸಂಭಾವನೆ ಎಷ್ಟು ಗೊತ್ತಾ?

ಬೆಂಗಳೂರು: ಸಿನಿಮಾಗಳಲ್ಲಿ ನಟಿಸಲು ಪ್ರಖ್ಯಾತ ನಾಯಕಿಯರ ಸಂಭಾವನೆ ಆಕಾಶ ಮುಟ್ಟಿದೆ. ಆದರೆ, ಇತ್ತೀಚೆಗೆ ಜಾಹೀರಾತುಗಳಲ್ಲಿ ನಟಿಸೋದಕ್ಕೂ ಅವರು ದುಬಾರಿ ಮೊತ್ತದ ಅಮೌಂಟ್‌ಅನ್ನು ಚಾರ್ಜ್‌ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಗರಿಷ್ಠ ಸಂಭಾವನೆ ಪಡೆದುಕೊಳ್ಳುವ ನಟಿಯೊಬ್ಬರು. ಕೇವಲ 50 ಸೆಕೆಂಡ್‌ನ ಒಂದು ಜಾಹೀರಾತಿಗೆ ಬರೋಬ್ಬರಿ 5 ಕೋಟಿ ರೂಪಾಯಿ ಚಾರ್ಜ್‌ ಮಾಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಮದುವೆಯಾದ ಬಳಿಕವು ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಸಂಸಾರ ಹಾಗೂ ಸಿನಿಮಾ ರಂಗವನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ನಟಿ ಬಾಲಿವುಡ್ ಚಿತ್ರರಂಗದಲ್ಲೂ ಕಮಾಲ್ ಮಾಡಿದ್ದಾರೆ. ಇದೀಗ  ಜಸ್ಟ್ 50 ಸೆಕೆಂಡ್ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ದುಬಾರಿ ಸಂಭಾವನೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ.

ಸಿನಿಮಾ ರಂಗ ಹಾಗೂ ಜಾಹೀರಾತು ಕ್ಷೇತ್ರದಲ್ಲೂ ನಯನತಾರಾಗೆ ಭಾರೀ ಬೇಡಿಕೆ ಇದೆ. ಶಾರುಖ್ ಖಾನ್ ಜೊತೆ ನಟಿಸಿದ್ದು ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಬಳಿಕ ನಯನತಾರಾ ಬೇಡಿಕೆ ಮತ್ತಷ್ಟು ಜಾಸ್ತಿಯಾಗಿದ್ದು ಹಾಗಾಗಿ ಸಂಭಾವನೆ ಕೂಡ ಜಾಸ್ತಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಜಾಹೀರಾತಿನಲ್ಲಿ ನಯನತಾರಾ ನಟಿಸಿದ್ದಾರೆ. ಕೇವಲ 50 ಸೆಕೆಂಡ್ ಕಾಣಿಸಿಕೊಂಡಿದ್ದಕ್ಕೆ 5 ಕೋಟಿ ರೂ. ನಟಿ ಪಡೆದಿದ್ದಾರೆ ಎನ್ನಲಾಗಿದೆ.

ಪ್ರತಿಷ್ಠಿತ ಸಂಸ್ಥೆ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದು, 2 ದಿನಗಳ ಕಾಲ ಶೂಟಿಂಗ್ ನಡೆದಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದಕ್ಕೆ 5 ಕೋಟಿ ಸಂಭಾವನೆ ಪಡೆಯುವ ಮೂಲಕ ಬೇಡಿಕೆ ನಟಿಯಾಗಿ ಸುದ್ದಿಯಾಗಿದ್ದಾರೆ. ಅಂದ ಹಾಗೆ ನಯನತಾರಾ ಒಂದು ಸಿನಿಮಾಗೆ ನಯನತಾರಾ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos