‘ಇಂಥ ಪಾತ್ರ ಮಾಡೋಲ್ಲ’- ರಚಿತಾರಾಮ್

‘ಇಂಥ ಪಾತ್ರ ಮಾಡೋಲ್ಲ’- ರಚಿತಾರಾಮ್

ಬೆಂಗಳೂರುಜೂನ್.11, ನ್ಯೂಸ್ ಎಕ್ಸ್ ಪ್ರೆಸ್:‘’ನಾನು ಮತ್ತೆ ಎಂದಿಗೂ ಇಂಥ ಬೋಲ್ಡ್ ಅಥವಾ ಹಾಟ್ ದೃಶ್ಯ ಹಾಗೂ ಹಾಡಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಮೊದಲೇ ಹೇಳುತ್ತಾ, ನನ್ನ ಕಾಲೆಳೆಯುತ್ತಿದ್ದವರಿಗೆ ನಾನು ಹೇಳೋದು ಇಷ್ಟೆ ಈ ಚಿತ್ರದಲ್ಲಿ ನನ್ನ ಬರೀ ಹಾಡು ಅಥವಾ ಆ ಬೋಲ್ಡ್ ಸೀನ್‌ಗೆ ಮಾತ್ರ ಸೀಮಿತ  ರಚಿತಾರಾಮ್ ಇತ್ತೀಚೆಗೆ ಸಿಕ್ಕಾಪಟ್ಟೆ ಇರುಸುಮುರುಸಿಗೆ ಒಳಗಾಗುತ್ತಿದ್ದಾರಂತೆ. ಒಂದು ಹಂತದಲ್ಲಿ ಸಿಟ್ಟು ಕೂಡ ಮಾಡಿದ್ದಾರೆ ಎಂಬುದು ಸದ್ಯ ಗಾಂಧಿನಗರ ಸುದ್ದಿ.

ಡಿಂಪಲ್ ಕ್ವೀನ್ ಯಾಕೆ ಹೀಗೆ ಎಂದರೆ ಅದಕ್ಕೆ ಕಾರಣ ‘ಐ ಲವ್ ಯು’ ಸಿನಿಮಾ ಎನ್ನುವ ಉತ್ತರ ಬರುತ್ತದೆ. ಈ ಚಿತ್ರದಲ್ಲಿ ಅವರನ್ನ ನಾಯಕಿ ಅಂತಲೇ ಯಾರೂ ನೋಡುತ್ತಿಲ್ಲ, ಕೇವಲ ಬೋಲ್ಡ್, ಹಾಟ್ ದೃಶ್ಯಗಳಲ್ಲಿ ಬಂದು ಹೋಗುವವರು ಎನ್ನುವಂತೆ ಕಾಲೆಳೆಯುತ್ತಿದ್ದಾರೆ ಎಂಬುದು ಅವರ ಸಿಟ್ಟಿನ ಹಿಂದಿನ ಕಾರಣ. ಹಾಗೆ ಕಾಲೆಳೆಯುತ್ತಿದ್ದವರಿಗೆ ರಚಿತಾ ರಾಮ್ ಕೊಟ್ಟ ಉತ್ತರವೇನು?  ಆರ್ ಚಂದ್ರು ನಿರ್ದೇಶಿಸಿ, ಉಪೇಂದ್ರ ನಾಯಕನಾಗಿ ನಟಿಸಿರುವ ಈ ‘ಐ ಲವ್ ಯು’ ಚಿತ್ರದಲ್ಲಿ ನಾನು ಫೀಮೇಲ್ ವರ್ಷನ್ ಆಫ್ ಉಪೇಂದ್ರ. ನನ್ನ ಪಾತ್ರಕ್ಕೆ ಈ ಚಿತ್ರದಲ್ಲಿ ಎಷ್ಟು ಮಹತ್ವ ಇದೆ ಎಂಬುದನ್ನು ನೀವು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಜೂನ್ 14ರಂದು ಎರಡೂ ಭಾಷೆಯಲ್ಲಿ ಸಿನಿಮಾ ಬರುತ್ತಿದೆ. ಮೊದಲ ಬಾರಿಗೆ ಟಾಲಿವುಡ್‌ಗೂ ಹೋಗುತ್ತಿರುವೆ. ನನ್ನ ಪಾಲಿಗೆ ಇದು ದೊಡ್ಡ ಸಿನಿಮಾ.

 

ಫ್ರೆಶ್ ನ್ಯೂಸ್

Latest Posts

Featured Videos