ನನ್ನ ಸಾವನ್ನು ಪ್ರದರ್ಶಿಸಬೇಡಿ’ : ಕಾರ್ನಾಡ್

ನನ್ನ ಸಾವನ್ನು ಪ್ರದರ್ಶಿಸಬೇಡಿ’ : ಕಾರ್ನಾಡ್

ಬೆಂಗಳೂರು, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್: ”ಸಾವು ಬಹಳ ಖಾಸಗಿ ಮತ್ತು ಕುಟುಂಬಕ್ಕೆ ಸಂಬಂಧಪಟ್ಟ ಸಂಗತಿ. ಸಾವನ್ನು ಪ್ರದರ್ಶನಕ್ಕೆ ಇಡುವುದು, ಗಂಟೆಗಟ್ಟಲೆ ಮೆರವಣಿಗೆ ಮಾಡುವುದು, ಇನ್ನೆಲ್ಲೋ ತೆಗೆದುಕೊಂಡು ಹೋಗಿ ಸಮಾಧಿ ಮಾಡುವುದೆಲ್ಲಾ ಅರ್ಥಹೀನ. ಸಹಜವಾಗಿ, ಸರಳವಾಗಿ ಬಹಳ ಬೇಗ ಘನತೆಯಿಂದ ನನ್ನನ್ನು ಕಳುಹಿಸಿಬಿಡಬೇಕು,” ಎಂದು ಹೇಳಿಕೊಂಡಿದ್ದರು. ಈ ಕಾರಣಕ್ಕೇ ಕುಂಕುಮವನ್ನೂ ಹಾಕದೆ ಅವರ ಇಚ್ಚೆಯಂತೆ ಸಹಜವಾಗಿ ಕಳುಹಿಸಿಕೊಟ್ಟೆವು ಎನ್ನುತ್ತಾರೆ ಕೆ.ಎಂ.ಚೈತನ್ಯ.

ಗಿರೀಶ್ ಕಾರ್ನಾಡ್ ಪತ್ನಿ ಸರಸ್ವತಿ ಅವರು ಸ್ವತಃ ವೈದ್ಯರಾಗಿದ್ದರಿಂದ ಕಾರ್ನಾಡರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಸ್ಥಿತಿ ಇಲ್ಲ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿತ್ತು. ಹೀಗಾಗಿಯೇ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಾ ವಿಶ್ರಾಂತಿಯಲ್ಲಿದ್ದರು.  ” ಕಾರ್ನಾಡರು ಮಾನಸಿಕವಾಗಿ ಬಹಳ ಕ್ರಿಯಾಶೀಲರಾಗಿ ರಂಗಭೂಮಿ, ಸಾಹಿತ್ಯದ ಬಗ್ಗೆ ನೆನ್ನೆ, ಮೊನ್ನೆವರೆಗೂ ಗಂಟೆಗಟ್ಟಲೆ ಚರ್ಚಿಸುತ್ತಿದ್ದವರಿಗೆ ಐದು ಹೆಜ್ಜೆ ನಡೆದರೂ ವಿಪರೀತ ನಿತ್ರಾಣ ಆಗುತ್ತಿತ್ತು. ಹೆಚ್ಚು ಓದಲು ಸಾಧ್ಯ ಆಗುತ್ತಿರಲಿಲ್ಲ. ಆದರೆ ನೆನಪು ಮಾಸಿರಲಿಲ್ಲ. ಓದಿದ್ದೆಲ್ಲಾ ನೆನಪಿರುತ್ತಿತ್ತು. ಯಾವುದಾದರೂ ಕಾರ್ಯಕ್ರಮದಲ್ಲಿ ಮಾತನಾಡಲು ಮಾಡಿಕೊಂಡ ಸಿದ್ದತೆಯಷ್ಟೂ ನೆನಪಿರುತ್ತಿತ್ತು. ದೈಹಿಕವಾಗಿ ಕ್ಷಮತೆ ಕ್ಷೀಣಿಸಿದ್ದರೂ ಅದು ಹೊರಗೆ ಗೊತ್ತಾಗದಷ್ಟು ಮಾನಸಿಕವಾಗಿ ಕ್ರಿಯಾಶೀಲರಾಗಿದ್ದರು,” ಎನ್ನುತ್ತಾರೆ ಅವರ ಕುಟುಂಬಕ್ಕೆ ಹತ್ತಿರವಿದ್ದವರು.

ಫ್ರೆಶ್ ನ್ಯೂಸ್

Latest Posts

Featured Videos