ಹೊಸ ಕಾರು ಖರೀದಿಸಿದ ನಮ್ರತಾ ಗೌಡ

ಹೊಸ ಕಾರು ಖರೀದಿಸಿದ ನಮ್ರತಾ ಗೌಡ

ಬೆಂಗಳೂರು: ನಮ್ರತಾ ಗೌಡ ಇತ್ತೀಚೆಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌  10 ರಲ್ಲಿ ಸ್ಪರ್ಧಿಸಿ ಫೈನಲ್ಸ್‌ಗೆ ಒಂದು ವಾರ ಮುಂಚೆ ದೊಡ್ಮನೆಯಿಂದ ಹೊರ ಬಂದರೂ ಅಭಿಮಾನಿಗಳ ಬಳಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ನಮ್ರತಾ ಗೌಡ  ಒಳ್ಳೆಯ ಡ್ಯಾನ್ಸರ್‌ ಆಗಿದ್ದು, ಈಕೆಯ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಿರುತೆರೆಯ ನಟಿ ನಮ್ರತಾ ಗೌಡ ಹುಟ್ಟು ಹಬ್ಬದಂದು, ತಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ನಟಿ ತಮ್ಮ ಬರ್ತ್‌ ಡೇ ದಿನ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.  ಈ ವಿಶೇಷ ದಿನದಂದು ನಮ್ರತಾ ಮನೆಗೆ MG ಎಲೆಕ್ಟ್ರಿಕಲ್ ಕಾರು ಹೊಸ ಅಥಿತಿಯಾಗಿ ಬಂದಿದೆ.

ನಟಿ ನಮ್ರತಾ ಗೌಡ MG ಮೋಟರ್​ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ಖರೀದಿಸಿದ್ದು, ಇದರ ಬೆಲೆ 6 ರಿಂದ 9 ಲಕ್ಷಗಳವರೆಗೂ ಇದೆ ಎನ್ನಲಾಗ್ತಿದೆ. ಸೀರಿಯಲ್‌ ನಟಿ ನಮ್ರತಾ ಗೌಡ ಆಕಾಶ ದೀಪ ಧಾರವಾಹಿಯಿಂದ ನಟನೆ ಮಾಡಿ, ಬಳಿಕ ಪುಟ್ಟಗೌರಿ  ಮದುವೆ ಹಾಗೂ ನಾಗಿಣಿ 2 ಸೀರಿಯಲ್‌ಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಟಿ ನಮ್ರತಾ  ಗೌಡ ಮೊದ ಮೊದಲು ಬಾಲನಟಿಯಾಗಿ ತುತ್ತೂರಿ, ಮಿಲನ ಅಂತಹ ಹಲವಾರು ಸಿನಿಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos