ನಾಳೆ ಬಾಬ್ರಿ ಮಸೀದಿ ಧ್ವಂಸ ದಿನ

ನಾಳೆ ಬಾಬ್ರಿ ಮಸೀದಿ ಧ್ವಂಸ ದಿನ

ಕೊಡಗು, ಡಿ. 5 : ಡಿ. 6ರ ಬಾಂಬ್ರಿ ಮಸೀದ್ ಧ್ವಂಸ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಡಿ.6 ರಂದು ಸೆಕ್ಷನ್ 144 ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಡಿ. 6, 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಸ್ಫೋಟಗೊಳಿಸಲಾಗಿತ್ತು. ಈ ಹಿನ್ನೆಲೆ ಡಿಸೆಂಬರ್ 6ರಂದು ಕೊಡಗು ಜಿಲ್ಲೆಯಲ್ಲಿ ಕರಾಳ ದಿನ, ವಿಜಯೋತ್ಸವ ಆಚರಿಸಲು ಎರಡು ಕೋಮಿನವರು ಸಿದ್ಧತೆ ನಡೆಸುತ್ತಿದ್ದರು. ಇದಕ್ಕೆ ಬಿಗಿ ಭದ್ರತೆಯನ್ನೂ ಕೋರಲಾಗಿತ್ತು.

ಆದರೆ, ಈ ಎರಡೂ ಕಾರ್ಯಕ್ರಮಗಳನ್ನು ಆಚರಿಸದಂತೆ ಕೊಡಗು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಕೊಡಗು ಡಿಸಿ ಕಣ್ಮನಿ ಜಾಯ್ಗೆ ಪತ್ರ ಬರೆದು ಸೆಕ್ಷನ್ 144ಗೆ ಮನವಿ ಮಾಡಿದ್ದರು. ಕೊಡಗು ಎಸ್ಪಿ ಪತ್ರ ಬರೆದ ಹಿನ್ನೆಲೆ ಕೊಡಗು ಡಿಸಿ ಸೆಕ್ಷನ್ 144 ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos