ಸಕಾಲದಲ್ಲಿ ಕಾರ್ಯ ನಿರ್ವಹಿಸಬೇಕು

ಸಕಾಲದಲ್ಲಿ ಕಾರ್ಯ ನಿರ್ವಹಿಸಬೇಕು

ದೇವನಹಳ್ಳಿ, ಸೆ. 13: ಕಾಲ ಮಿತಿಯಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಲೋಕಾಯುಕ್ತ ವತಿಯಿಂದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಸರ್ಕಾರಿ ಕಚೇರಿಗಳಿಗೆ ಅನಾವಶ್ಯಕವಾಗಿ ಫಲಾನುಭವಿಗಳನ್ನು ಅಲೆದಾಡಿಸಬಾರದು ಇಲಾಖೆಗೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ದೂರುಗಳು ಬಂದಲ್ಲಿ ಇತ್ಯರ್ಥ ಪಡಿಸಬೇಕು.

ಪಾರದರ್ಶಕವಾಗಿ ಜನರಿಗೆ ಅನುಕೂಲವಾಗಬೇಕು. 15 ಪ್ರಕರಣಗಳು ಬಂದಿದ್ದು, ಅದರಲ್ಲಿ 08 ಪ್ರಕರಣಗಳು ಕಂದಾಯ ಇಲಾಖೆ, ಪುರಸಭೆ 04 , ಎಡಿಎಲ್ ಆರ್ 03 ಇದರಲ್ಲಿ 05 ಪ್ರಕರಣಗಳನ್ನು ಇಲ್ಲಯೇ ಇತ್ಯರ್ಥ ಪಡಿಸಲಾಗಿದೆ. ಇನ್ನುಳಿದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಂಬಂಧಿಸಿದ ಅಧಿಕಾರಿಗಳು ಸಮಯವನ್ನು ತೆಗೆದುಕೊಂಡಿದ್ದು, ಆ ಸಮಯದ ಒಳಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು.

ಪ್ರತಿ ತಿಂಗಳು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾರ್ವಜನಿಕರ ದೂರುಗಳನ್ನು ಪಡೆಯುತ್ತಿದ್ದೇವೆ. ದೂರ ದಾರರು ಮುಕ್ತವಾಗಿ ಯಾವುದೇ ಸಮಸ್ಯೆಗಳು ಇದ್ದಲ್ಲಿ ಪತ್ರಗಳ ಮೂಲಕ ನೀಡಬಹುದು. ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸೇರಿದೆ. ಸ್ಮಶಾನ ಒತ್ತುವರಿ ಪಹಣಿಯಲ್ಲಿ ವ್ಯತ್ಯಾಸ, ರಾಜ ಕಾಲುವೆ ಒತ್ತುವರಿ, ಸರ್ವೇ ಇಲಾಖೆ ಹಾಗೂ ವಿವಿಧ ದೂರುಗಳು ಸಲ್ಲಿಕೆ ಆಗಿದೆ ಎಂದು ಹೇಳಿದರು.

ಬೆರಳೆಣಿಕೆಯಷ್ಟು ಅರ್ಜಿಗಳು ಮಾಹಿತಿಯ ಕೊರತೆ

ತಾಲೂಕಿನಾದ್ಯಂತ ಕೇವಲ 15 ಅರ್ಜಿಗಳು ಮಾತ್ರ ನೀಡಿದ್ದು, ಸಾರ್ವಜನಿಕರಿಗೆ ಮಾಹಿತಿಯ ಕೊರತೆಯೋ ಅಥವ ಅವರಿಗೆ ದೂರು ನೀಡಲು ಹಿಂಜರಿಕೆಯೋ ಗೊತ್ತಾಗುತ್ತಿಲ್ಲ. ಲೋಕಾಯುಕ್ತರ ಬೇಟಿಯ ಬಗ್ಗೆ ತಾಲೂಕಿನ ಪ್ರತಿಹಳ್ಳಿಗಳಲ್ಲಿ ಪ್ರಚಾರ ಮಾಡಿದರೆ ಮುಂದೆ ನಡೆಯುವ ಜನಸಂಪರ್ಕ ಸಭೆಗಳಿಗೆ ಸಾವಿರಾರು ಜನ ತಮ್ಮ ಅಹವಾಲುಗಳನ್ನೊತ್ತು ಬರಲಿದ್ದಾರೆ  ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ದೂರುದಾರೆ ಪುಟ್ಟಪ್ಪಣನ ಗುಡಿ ಬೀದಿ ಗಂಗಮ್ಮ ಮಾತನಾಡಿ ಗೋಕರೆ ಸರ್ವೇ ನಂ.133 ರಲ್ಲಿ ಪೋಡಿ ಮಾಡಿ ಸಿವಿಲ್ ನ್ಯಾಯಾಲಯದಲ್ಲಿ ತಡೆ ಯಾಜ್ಞೆ ಇದೆ. ತಹಶೀಲ್ದಾರ್ ಅವರ  ಸಿವಿಲ್ ಕೋಟ್ ನಲ್ಲಿ ಇತ್ಯರ್ಥ ಪಡಿಸಿಕೊಳ್ಳಿ ಎಂದಿದ್ದರು. ಆದರೆ ರಾತ್ರೋ ರಾತ್ರಿ ಪೋಡಿ ಮಾಡಿ ದುರಸ್ಥಿ ಮಾಡಿ ಹೊಸ ಸರ್ವೇ ನಂ 227 ಮಾಡಿದ್ದಾರೆ. ಇದನ್ನು ಇತ್ಯರ್ಥ ಪಡಿಸಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಅವರಿಗೆ ಮನವಿ ಮಾಡಿದರು.

ಆರ್‌ಟಿಐ ಕಾರ್ಯಕರ್ತ ಆಂಜಿನಪ್ಪ ಮಾತನಾಡಿ ತಾಲೂಕು ಕಚೇರಿಯಲ್ಲಿ ಸರಿಯಾದ ರೀತಿ ಕೆಲಸವಾಗುತ್ತಿಲ್ಲ ಎಂದು ಗಮನಕ್ಕೆ ತಂದರು. ಈ ವೇಳೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಶಿವರಾಜ್, ಚಿಕ್ಕರಾಜ ಶೆಟ್ಟಿ , ತಹಶೀಲ್ದಾರ್ ಅಜಿತ್ ರೈ, ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos