ಮುಸ್ಲಿಂ ಕೈದಿಗೆ ‘ಓಂ’ ಚಿಹ್ನೆಯಿಂದ ಬರೆ ಹಾಕಿದ ಜೈಲರ್.!

ಮುಸ್ಲಿಂ ಕೈದಿಗೆ ‘ಓಂ’ ಚಿಹ್ನೆಯಿಂದ ಬರೆ ಹಾಕಿದ ಜೈಲರ್.!

ಮುಂಬೈ ಏ. 20, ನ್ಯೂಸ್ ಎಕ್ಸ್ ಪ್ರೆಸ್: ಮುಂಬೈನ ತಿಹಾರ್ ಜೈಲಿನಲ್ಲಿ ಮುಸ್ಲಿಂ ಕೈದಿಯೊಬ್ಬನ ಬೆನ್ನ ಮೇಲೆ ಓಂ ಎಂಬ ಚಿಹ್ನೆಯ ಬರೆ ಹಾಕಿರುವ ಘಟನೆ ನಡೆದಿದೆ.

ಜೈಲಿನ ಜೈಲರ್ ರಾಜೇಶ್ ಚೌವ್ಹಾಣ್ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. 2017ರಿಂದ ಮುಂಬೈನ ತಿಹಾರ್ ಜೈಲ್ನಲ್ಲಿರುವ ಶಬ್ಬೀರ್ ಅಲಿಯಾಸ್ ನಬ್ಬೀರ್, ಏ. 12ರಂದು ತನ್ನ ಬ್ಯಾರಕ್ ನಲ್ಲಿ ಇಂಡಕ್ಷನ್ ಸ್ಟೌವ್ ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ರಾಜೇಶ್ ಚೌವ್ಹಾಣ್ ಗೆ ಕಂಪ್ಲೇಂಟ್ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ರಾಜೇಶ್ ಚೌವ್ಹಾಣ್ ತನ್ನ ಸಿಬ್ಬಂದಿಯಿಂದ ಶಬ್ಬೀರ್ ಮೇಲೆ ಹಲ್ಲೆ ಮಾಡಿಸಿದ್ದಾನೆ.

ಜೈಲಿನ ಕೋಣೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಸಿಬ್ಬಂದಿ, ಬಳಿಕ ಓಂ ಅಚ್ಚಿನ ರಾಡ್ ವೊಂದನ್ನ ಕಾಯಿಸಿ ಬೆನ್ನಿಗೆ ಊರಿದ್ದಾರೆ. 2 ದಿನ ಈತನಿಗೆ ಊಟವನ್ನೇ ನೀಡದೇ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಬ್ಬೀರ್ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ. ತಕ್ಷಣ ಕುಟುಂಬಸ್ಥರು ಶಬ್ಬೀರ್ ಗೆ ಜೈಲಿನಲ್ಲಿ ಜೀವಭಯ ಇದೇ ಅಂತಾ ಕಾರ್ ಕಾರ್ ದೂಮಾ ಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಹೀಗಾಗಿ ಮ್ಯಾಜಿಸ್ಟ್ರೇಟ್ ರಿಚಾ ಪರಿಹಾರ್ ಎದುರು ಶಬ್ಬೀರ್ನನ್ನ ಹಾಜರುಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮ್ಯಾಜಿಸ್ಟ್ರೇಟ್ ಏನೆಲ್ಲಾ ಸಮಸ್ಯೆ ಆಗುತ್ತಿದೆ ಎಂದು ಕೇಳಿದಾಗ ಶಬ್ಬೀರ್ ಜೈಲಿನಲ್ಲಿ ನಡೆಯುತ್ತಿರುವದೆನ್ನೆಲ್ಲಾ ಬಿಚ್ಚಿಟ್ಟಿದ್ದಾನೆ. ತಕ್ಷಣ ಜೈಲರ್ ನನ್ನ ಕೆಲಸದಿಂದ ವಿಮುಕ್ತಿಗೊಳಿಸಲಾಗಿದ್ದು, ಪ್ರಾಧಿಕಾರದ ಡಿಜಿಪಿಗೆ ವರದಿ ನೀಡುವಂತೆ ಆದೇಶಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos