ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗೆ 15 ದಿನ ಪೊಲೀಸರು ವಶಕ್ಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗೆ 15 ದಿನ ಪೊಲೀಸರು ವಶಕ್ಕೆ

ಬೆಂಗಳೂರು, ಜ. 13: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂವರೆ ವರ್ಷದ ಬಳಿಕ ಮತ್ತೊಬ್ಬ ಆರೋಪಿ ರಿಷಿಕೇಶ್ ದೇವಾಡಿಕರ್ ಅಲಿಯಾಸ್ ಮುರಳಿ ಎಂಬಾತನನ್ನು ಎಸ್ಐಟಿ ಪೊಲೀಸರು 3 ದಿನಗಳ ಹಿಂದೆ ಜಾರ್ಖಂಡ್ನಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ಗಳನ್ನು ನಾಶ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಎಸ್ಐಟಿ ತಂಡವು ಆರೋಪಿಯನ್ನು ಸೆರೆಹಿಡಿಯಲು ಬಲೆ ಬೀಸಿತ್ತು. ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯಾಗಿದ್ದಾನೆ.

ಇಂತಹ ಆರೋಪಿಯನ್ನು ಎಸ್ ಐ ಟಿ ಪೊಲೀಸರು ಇಂದು ಬೆಂಗಳೂರಿನ 1ನೇ ಸಿಸಿ ಹೆಚ್ ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಆರೋಪಿಯನ್ನು 15 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ 1 ಸಿಸಿಹೆಚ್ ನ್ಯಾಯಾಲಯ ನ್ಯಾಧೀಶರು ಆದೇಶಿಸಿದ್ದಾರೆ. ಈ ಮೂಲಕ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಆರೋಪಿಯಿಂದ ಕಲೆ ಹಾಕಲು ಅನುಕೂಲವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos