ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿ ಎಂಎಲ್‌ಎ ಮುನಿಸು!

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿ ಎಂಎಲ್‌ಎ ಮುನಿಸು!

ದೇವನಹಳ್ಳಿ, ಆ. 15: ಇಂದು ದೇಶದಲ್ಲೆಡೆ 73 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ಮನೆ ಮಾಡಿದ್ದು, ವಿಜೃಂಭಣೆಯ ಆಚರಣೆಗೆ ಕಳೆದ ಒಂದು ವಾರದಿಂದಲೆ ಎಲ್ಲೆಡೆ ಭರ್ಜರಿ ತಯಾರಿ ಸಹ ನಡೆದಿತ್ತು. ಆದ್ರೆ ಅಷ್ಟೆಲ್ಲ ತಯಾರಿ ನಡೆಸಿದ್ರು ಇಲ್ಲೊಂದು ಜಿಲ್ಲೆಯಲ್ಲಿ ಮಾತ್ರ ಡಿಸಿ ಮತ್ತು ಎಂಎಲ್‌ಎ ಮುನಿಸಿನಿಂದ ವಿಜೃಂಭಣೆಯಿಂದ ನಡೆಯಬೇಕಿದ್ದ ರಾಷ್ಟ್ರೀಯಾ ಹಬ್ಬ ಗೊಂದಲದಲ್ಲಿ ತೆರೆ ಕಂಡಿದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಗಣ್ಯರಿಲ್ಲದೆ ಖಾಲಿ ವೇದಿಕೆ ಮುಂದೆಯೆ ನೇರವೇರಿದ ದ್ವಜಾರೋಹಣ. ದ್ವಜಾರೋಹಣಕ್ಕೂ ಮುನ್ನಾ ನಮ್ಮನ್ನ ವೇದಿಕೆಗೆ ಕರೆದಿಲ್ಲ ಅಂತ ಮುನಿಸಿಕೊಂಡಿರೂ ಜನ ಪ್ರತಿನಿಧೀಗಳು. ಮುನಿಸಿಕೊಂಡ ಜನಪ್ರತಿನಿಧೀಗಳ ಮನವೊಲಿಸಲು ಹರಸಾಹಸ ಪಡ್ತಿರೂ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚೆನ್ನಣ್ಣನವರ್.  ಹೌದು, ಅಂದಹಾಗೆ ವಿಜೃಂಭಣೆಯಿಂದ ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಈ ರೀತಿ ಗೊಂದಲ ಮತ್ತು ಮುನಿಸುಗಳಿಂದ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ. ಇಂದು ಬೆಳಗ್ಗೆ ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲೆಯ ಮೂರು ಜನ ಶಾಸಕರು, ಜನ ಪ್ರತಿನಿಧೀಗಳ ಜೊತೆಗೆ ಶಾಲಾ ಮಕ್ಕಳು ಆಗಮಿಸಿದ್ರು. ಈ ವೇಳೆ ದ್ವಜಾರೋಹಣಕ್ಕೆ ಆಗಮಿಸಿದ ಜಿಲ್ಲೆಯ ಡಿಸಿ ಕರಿಗೌಡ ಗಣ್ಯರನ್ನ ವೇದಿಕೆಗೆ ಕರೆಯುವ ಮುನ್ನವೆ ಡಿಸಿ ಕರಿಗೌಡ ಒಬ್ಬರೆ ಹೋಗಿ ದ್ವಜಾರೋಹಣ ನೆರವೇರಿಸಿದ್ರು. ಹೀಗಾಗಿ ಡಿಸಿ ಕಾರ್ಯಕ್ಕೆ ಕೆಂಡಾಮಂಡಲವಾದ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಜಿಲ್ಲೆಯ ಜನ ಪ್ರತಿನಿಧೀಗಳು ಕಾರ್ಯಕ್ರಮ ವೇದಿಕೆಗೆ ಬಹಿಷ್ಕಾರವಾಕಿ ಡಿಸಿ ವಿರುದ್ದ ವಾಗ್ದಾಳಿ ನಡೆಸಿದ್ರು.

ಶಾಸಕ ಹಾಗೂ ಜನಪ್ರತಿನಿಧೀಗಳು ಮುನಿಸಿಕೊಂಡು ವೇದಿಕೆಗೆ ಬಾರದ ಹಿನ್ನೆಲೆಯಲ್ಲಿ ಖಾಲಿ ವೇದಿಕೆಯಲ್ಲಿ ಡಿಸಿ ಕರಿಗೌಡ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ರು. ಹೀಗಾಗಿ ಡಿಸಿ ಕಾರ್ಯಕ್ಕೆ ಮತ್ತಷ್ಟು ಆಕ್ರೋಶಗೊಂಡ ಪ್ರತನಿಧೀಗಳು ಕಾರ್ಯಕ್ರಮದಿಂದ ನಿರ್ಗಮಿಸೂ ಯತ್ನ ಮಾಡಿದ್ರು. ಹೀಗಾಗಿ ಈ ವೇಳೆ ಸ್ವತಂಹ ಶಾಸಕರ ಬಳಿಗೆ ತೆರಳಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚೆನ್ನಣ್ಣನವರ್ ಶಾಸಕರ ಮನವೊಲಿಕೆಗೆ ಯತ್ನಿಸಿ ವೇದಿಕೆಗೆ ಆಗಮಿಸುವಂತೆ ಮನವಿ ಮಾಡಿದ್ರು. ಆದ್ರೆ ಯಾವುದೇ ಮನಃವಿಗೂ ಜನಪ್ರತಿನಿಧೀಗಳು ಸ್ವಂದಿಸದ ಹಿನ್ನೆಲೆಯಲ್ಲಿ ಸ್ವತಃಹ ಡಿಸಿ ಕರಿಗೌಡ ಜನಪ್ರತಿನಿಧೀಗಳ ಬಳಿಗೆ ಬಂದು ಕ್ಷಮೆಯಾಚಿಸಿ ವೇದಿಕೆಗೆ ಬರಮಾಡಿಕೊಂಡ್ರು, ಇನ್ನೂ ರಾಷ್ಟ್ರೀಯಾ ಹಬ್ಬದ ಕಾರ್ಯಕ್ರಮದಲ್ಲಿ ಇಷ್ಟೆಲ್ಲ ರಾದ್ದಾಂತ ನಡೆಯುತ್ತಿದ್ದಂತೆ ಬೆಳಗಿನಿಂದ ಕಾರ್ಯಕ್ರಮಕ್ಕೆ ಬಂದು ಕಾದು ಕುಳಿತಿದ್ದ ಶಾಲಾ ಮಕ್ಕಳು ಬಿಸಿಲಿನಲ್ಲೆ ಕಾದು ಕಾದು ಸುಸ್ತಾದ್ರು. ಜತೆಗೆ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧೀಗಳು ನಡೆದುಕೊಂಡ ರೀತಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.

ಒಟ್ಟಾರೆ ಸಾರ್ವಜನಿಕರ ಸಹ ಭಾಗಿತ್ವದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧೀಗಳು ಒಂದಾಗಿ ವಿಜೃಂಭಣೆಯಿಂದ ನಡೆಯಬೇಕಿದ್ದ ಕಾರ್ಯಕ್ರಮವನ್ನ ಗೊಂದಲ ಮತ್ತು ಮುನಿಸುಗಳ ನಡುವೆಯೆ ನಡೆಸಿಕೊಟ್ಟಿದ್ದು, ಮಾತ್ರ ನಿಜಕ್ಕೂ ದುರಂತ.

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos